ಸ್ವಾತಿ ಮಲಿವಾಲ್‌ ಜೊತೆ ಅನುಚಿತ ವರ್ತನೆ ನಿಜ: ಒಪ್ಪಿಕೊಂಡ ಆಪ್‌ ಪಕ್ಷ

| Published : May 15 2024, 01:38 AM IST

ಸ್ವಾತಿ ಮಲಿವಾಲ್‌ ಜೊತೆ ಅನುಚಿತ ವರ್ತನೆ ನಿಜ: ಒಪ್ಪಿಕೊಂಡ ಆಪ್‌ ಪಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಿ ಮಲಿವಾಲ್‌ ಮೇಲೆ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಹಲ್ಲೆ ನಡೆದಿದ್ದು ನಿಜ ಎಂಬುದಾಗಿ ಆಮ್‌ ಆದ್ಮಿ ಪಕ್ಷ ಒಪ್ಪಿಕೊಂಡಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ತನ್ನದೇ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಅವರ ಜೊತೆ ವ್ಯಕ್ತಿಯೊಬ್ಬರು ಅನುಚಿತವಾಗಿ ನಡೆದುಕೊಂಡಿದ್ದು ನಿಜ.

ಈ ಬಗ್ಗೆ ಕೇಜ್ರಿವಾಲ್‌ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಮ್‌ಆದ್ಮಿ ಪಕ್ಷ ಹೇಳಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್‌ ನಾಯಕ ಸಂಜಯ್‌ ಸಿಂಗ್‌, ‘ಸೋಮವಾರ ಸ್ವಾತಿ ಅವರು ಕೇಜ್ರಿವಾಲ್‌ರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಬಂದಿದ್ದಾಗ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ ಅವರ ಮೇಲೆ ಅನುಚಿತವಾಗಿ ವರ್ತಿಸಿದ್ದಾರೆ.

ಈ ಕುರಿತು ಅರವಿಂದ್‌ ಕೇಜ್ರಿವಾಲ್‌ ಗಮನಕ್ಕೆ ತಂದಿದ್ದು, ಬಿಭವ್‌ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಸ್ವತಃ ಕೇಜ್ರಿವಾಲ್‌ ಅವರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ದೂರಿದ್ದರು.