ಸಾಮಾಜಿಕ ಜಾಲ ತಾಣಗಳಲ್ಲಿ ಆಪ್‌ ಅಭಿಯಾನ

| Published : Mar 26 2024, 01:06 AM IST / Updated: Mar 26 2024, 09:20 AM IST

ಸಾರಾಂಶ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಬಕಾರಿ ಹಗರಣದಲ್ಲಿ ಬಂಧಿಸಿರುವುದನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಅಭಿಯಾನವನ್ನು ಕೈಗೊಂಡಿದೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಬಕಾರಿ ಹಗರಣದಲ್ಲಿ ಬಂಧಿಸಿರುವುದನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಅಭಿಯಾನವನ್ನು ಕೈಗೊಂಡಿದೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವೆ ಆತಿಷಿ, ‘ಅರವಿಂದ್‌ ಕೇಜ್ರಿವಾಲ್‌ ಬಂಧನ ಖಂಡಿಸಿ ಆಪ್‌ ಪಕ್ಷದ ಎಲ್ಲ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲತಾಣದ ಡಿಪಿಯನ್ನು ಬದಲಿಸಿಕೊಳ್ಳಬೇಕು. 

ಅರವಿಂದ್ ಕೇಜ್ರಿವಾಲ್‌ ಜೈಲಿನ ಕಂಬಿಗಳ ಹಿಂದೆ ಇರುವ ಚಿತ್ರವನ್ನು ಹಾಕಿಕೊಂಡು ‘ಕೇಜ್ರಿವಾಲ್‌ ಕಂಡರೆ ಬೆಚ್ಚಿಬೀಳುವ ವ್ಯಕ್ತಿ ಮೋದಿ’ ಎಂದು ಅಡಿಬರಹ ಹಾಕಿಕೊಳ್ಳಬೇಕು’ ಎಂದರು.

‘ಸಾರ್ವಜನಿಕರೂ ಈ ಚಿತ್ರವನ್ನು ಹಾಕಿಕೊಂಡು ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಮೂಲಕ ಪ್ರಧಾನಿಯ ಸರ್ವಾಧಿಕಾರ ತೊಡೆದು ಹಾಕಲು ಶ್ರಮಿಸಬೇಕು’ ಎಂದು ಕರೆ ನೀಡಿದರು.