‘ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಜನತೆಗೆ ನ್ಯಾಯ ಸಿಕ್ಕಿಲ್ಲ ಎಂದು ಆಪ್‌ ನಾಯಕ ಚಾಟಿಯೇಟು

| Published : Jan 07 2025, 12:30 AM IST / Updated: Jan 07 2025, 04:43 AM IST

‘ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಜನತೆಗೆ ನ್ಯಾಯ ಸಿಕ್ಕಿಲ್ಲ ಎಂದು ಆಪ್‌ ನಾಯಕ ಚಾಟಿಯೇಟು
Share this Article
  • FB
  • TW
  • Linkdin
  • Email

ಸಾರಾಂಶ

‘ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ’ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯೊಂದರಲ್ಲೇ ಚಾಟಿಯಲ್ಲಿ ಹೊಡೆದುಕೊಂಡ ಘಟನೆ ನಡೆದಿದೆ.

ಸೂರತ್‌: ‘ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ’ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯೊಂದರಲ್ಲೇ ಚಾಟಿಯಲ್ಲಿ ಹೊಡೆದುಕೊಂಡ ಘಟನೆ ನಡೆದಿದೆ.

 ಈ ಮೂಲಕ ತಮಿಳ್ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಚಾಟಿಯೇಟನ್ನು ಅವರು ಅನುಕರಿಸಿದ್ದಾರೆ.ಅಮ್ರೇಲಿಯಲ್ಲಿ ಪಾಟಿದಾರ್‌ ಮಹಿಳೆಯ ಮೇಲೆ ಬಿಜೆಪಿ ನಾಯಕರೊಬ್ಬರ ಮಾನಹಾನಿ ಘಟನೆಯನ್ನು ಉಲ್ಲೇಖಿಸಿ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಜನರಲ್ಲಿ ಕ್ಷಮೆ ಕೇಳಿದ ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ತನ್ನ ಪ್ಯಾಂಟಿನ ಬೆಲ್ಟ್‌ ತೆಗೆದುಕೊಂಡು ಹೊಡೆದುಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ‘ತಾನು ಸಂತ್ರಸ್ತರಿಗಾಗಿ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳನ್ನು ನಡೆಸುತ್ತಿದ್ದೇನೆ. ಆದರೆ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳು ಮತ್ತು ನಾಯಕರ ಭ್ರಷ್ಟ ನಂಟಿನಿಂದ ಜನರಿಗೆ ನ್ಯಾಯ ಪಡೆಯುವುದು ಕಷ್ಟವಾಗಿದೆ. ಗುಜರಾತಿನಲ್ಲಿ ಹಲವು ದುರಂತ, ಅಕ್ರಮಗಳು ನಡೆದಿವೆ. ಆದರೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗಿಲ್ಲ’ ಎಂದು ಹೇಳಿ ಚಾಟಿ ಬೀಸಿಕೊಂಡರು. ಈ ವೇಳೆ ವೇದಿಕೆ ಮೇಲಿದ್ದ ಆಪ್ ನಾಯಕರು ತಡೆಯಲು ಯತ್ನಿಸಿದರು.