ಆಪ್‌ನ ಏಕೈಕ ಲೋಕಸಭಾ ಸಂಸದ ಆಗಿದ್ದ ಪಂಜಾಬಿನ ಸುಹಿಲ್‌ ಕುಮಾರ್‌ ರಿಂಕು ಬುಧವಾರ ಬಿಜೆಪಿಗೆ ಸೇರ್ಪಡೆಯಾದರು.

ನವದೆಹಲಿ: ಆಪ್‌ನ ಏಕೈಕ ಲೋಕಸಭಾ ಸಂಸದ ಆಗಿದ್ದ ಪಂಜಾಬಿನ ಸುಶೀಲ್‌ ಕುಮಾರ್‌ ರಿಂಕು ಬುಧವಾರ ಬಿಜೆಪಿಗೆ ಸೇರ್ಪಡೆಯಾದರು. ಇದು ಆಪ್‌ಗೆ ಹಿನ್ನಡೆ ತಂದಿದ್ದು, ಪಂಜಾಬಲ್ಲಿ ನೆಲೆಗೆ ಯತ್ನಿಸುತ್ತಿರುವ ಬಿಜೆಪಿಗೆ ಬಲ ನೀಡಿದೆ.

ಇದೇ ವೇಳೆ, ಜಲಂಧರ್‌ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆಪ್‌ ಶಾಸಕ ಶೀತಲ್‌ ಅಂಗುರಾಲ್‌ ಕೂಡ ಬಿಜೆಪಿ ಸೇರಿದ್ದಾರೆ.

ರಿಂಕು ಕಳೆದ ವರ್ಷ ಪಂಜಾಬ್‌ನ ಜಲಂಧರ್‌ನ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಎಪಿ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಈ ಮೂಲಕ ಆಪ್‌ನ ಏಕೈಕ ಲೋಕಸಭೆ ಸಂಸದ ಎನ್ನಿಸಿಕೊಂಡಿದ್ದರು. ಅದಕ್ಕೂ ಮುನ್ನ ಅವರು ಕಾಂಗ್ರೆಸ್‌ನಲ್ಲಿದ್ದರು.

ಈ ಲೋಕಸಭೆ ಚುನಾವಣೆಗೆ ಜಲಂಧರ್‌ನಿಂದ ಅವರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.