ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಿಎಂ ಕಚೇರಿಯಲ್ಲಿ ಅಂಬೇಡ್ಕರ್‌ ಫೋಟೋ ಸ್ಥಳಾಂತರ : ವಿವಾದ

| N/A | Published : Feb 25 2025, 12:46 AM IST / Updated: Feb 25 2025, 05:59 AM IST

ಸಾರಾಂಶ

 ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಿಎಂ ಕಚೇರಿಯಲ್ಲಿನ ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಫೋಟೋಗಳನ್ನು, ಕಚೇರಿಯಲ್ಲಿನ ಬೇರೆ ಗೋಡೆಗೆ ಸ್ಥಳಾಂತರಿಸಿದ್ದು ವಿವಾದಕ್ಕೀಡಾಗಿದೆ.  

ನವದೆಹಲಿ: ಬಿಜೆಪಿ ಹೆದ್ದ ಬಳಿಕ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿರುವ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಿಎಂ ಕಚೇರಿಯಲ್ಲಿನ ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್‌ ಫೋಟೋಗಳನ್ನು, ಕಚೇರಿಯಲ್ಲಿನ ಬೇರೆ ಗೋಡೆಗೆ ಸ್ಥಳಾಂತರಿಸಿದ್ದು ವಿವಾದಕ್ಕೀಡಾಗಿದೆ. ಆ ಫೋಟೋಗಳಿದ್ದ ಜಾಗದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲಾಗಿದೆ.

ಇದನ್ನು ದಲಿತ ವಿರೋಧಿ ನಡೆ ಎಂದು ಆಪ್‌ ಖಂಡಿಸಿದೆ. ಆದರೆ ಸಿಎಂ ರೇಖಾ ಇದಕ್ಕೆ ತಿರುಗೇಟು ನೀಡಿ, ‘ಮುಖ್ಯಮಂತ್ರಿ ಕುರ್ಚಿಯ ಗೋಡೆ ಹಿಂದೆ ದೇಶದ ಹಾಲಿ ಆಡಳಿತಗಾರರ ಫೋಟೋ ಇರಬೇಕು ಎಂದು ಮುರ್ಮು ಹಾಗೂ ಮೋದಿ ಫೋಟೋ ಹಾಕಲಾಗಿದೆ. ಎದುರಿನ ಗೋಡೆ ಮೇಲೆ ಅಂಬೇಡ್ಕರ್ ಹಾಗೂ ಭಗತ್‌ ಫೋಟೋ ಹಾಕಲಾಗಿದೆ. ಯಾರಿಗೂ ಅಗೌರವ ತೋರಿಲ್ಲ’ ಎಂದಿದ್ದಾರೆ.