ಸಾರಾಂಶ
ವಸಂತ ಪಂಚಮಿಗೆ ತಯಾರಿಸಲಾಗಿದ್ದ ಸರಸ್ವತಿ ದೇವಿಯ ಮೂರ್ತಿಯನ್ನು ಹಿಂದೂ ಸಂಸ್ಕೃತಿಯ ವಿರುದ್ಧವಾಗಿ ಕೆತ್ತಿರುವುದನ್ನು ಎಬಿವಿಪಿ ಖಂಡಿಸಿದೆ
ಅಗರ್ತಲಾ: ತ್ರಿಪುರಾ ರಾಜಧಾನಿ ಅಗರ್ತಲಾದ ಲಲಿತಕಲಾ ಕಾಲೇಜಿನಲ್ಲಿ ವಸಂತ ಪಂಚಮಿಯಂದು ಪೂಜಿಸಲು ಕೆತ್ತನೆ ಮಾಡಲಾಗಿದ್ದ ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆಯೇ ಇರಲಿಲ್ಲ ಎಂಬುದ ವಿವಾದಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ಎಬಿವಿಪಿ ಮತ್ತು ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ತ್ರಿಪುರಾ ಎಬಿವಿಪಿ ಕಾರ್ಯದರ್ಶಿ ದಿಬಾಕರ್, ‘ಸರಸ್ವತಿ ದೇವಿಯ ವಿಗ್ರಹವನ್ನು ಅಶ್ಲೀಲವಾಗಿ ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟಿರದ ರೀತಿಯಲ್ಲಿ ಕೆತ್ತನೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಕಾಲೇಜಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.ಬಳಿಕ ಕಾಲೇಜು ಆಡಳಿತ ಮಂಡಳಿ ಸರಸ್ವತಿ ದೇವಿಯ ವಿಗ್ರಹವನ್ನು ತೆರವು ಮಾಡಿದೆ.