ಆಕಸ್ಮಿಕವಾಗಿ ಸಿಡಿದ ಗನ್‌: ಗೋವಿಂದ ಕಾಲಿಗೆ ಗುಂಡು

| Published : Oct 02 2024, 01:20 AM IST

ಸಾರಾಂಶ

ರಿವಾಲ್ವರ್‌ನಿಂದ ಆಕಸ್ಮಿವಾಗಿ ಸಿಡಿದ ಗುಂಡು ನಟ ಗೋವಿಂದ ಕಾಲಿಗೆ ತಗುಲಿ ಅವರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕಾಲಿಗೆ ಹೊಕ್ಕಿದ್ದ ಗುಂಡು ಹೊರತೆಗೆದಿದ್ದು, ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ.

ಮುಂಬೈ: ರಿವಾಲ್ವರ್‌ನಿಂದ ಆಕಸ್ಮಿವಾಗಿ ಸಿಡಿದ ಗುಂಡು ನಟ ಗೋವಿಂದ ಕಾಲಿಗೆ ತಗುಲಿ ಅವರು ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ ಮುಂಬೈನಲ್ಲಿ ನಡೆದಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಕಾಲಿಗೆ ಹೊಕ್ಕಿದ್ದ ಗುಂಡು ಹೊರತೆಗೆದಿದ್ದು, ಇದೀಗ ನಟ ಚೇತರಿಸಿಕೊಳ್ಳುತ್ತಿದ್ದಾರೆ.

ಕೋಲ್ಕತಾದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೊರಟಿದ್ದ ಗೋವಿಂದ, ತಮ್ಮ ರಿವಾಲ್ವರ್‌ ಅನ್ನು ಕಪಾಟಿನಲ್ಲಿ ಇಡುವಾಗ ಅದರ ಟ್ರಿಗರ್‌ ಒತ್ತಿದಂತಾಗಿ ಗುಂಡು ಹಾರಿತ್ತು. ಅದು ಅವರ ಕಾಲಿಗೆ ತಗುಲಿತು ಎಂದು ಅವರ ಮ್ಯಾನೇಜರ್‌ ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿಲ್ಲವಾದರೂ ತನಿಖೆ ಆರಂಭಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ಈ ಸಂಬಂಧ ಅಭಿಮಾನಿಗಳಿಗೆ ಆಡಿಯೋ ಸಂದೇಶ ಕಳಿಸಿರುವ ಗೋವಿಂದ, ‘ಅಭಿಮಾನಿಗಳು, ಪೋಷಕರು ಮತ್ತು ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನನಗೆ ತಗುಲಿದ್ದ ಗುಂಡು ತೆಗೆಯಲಾಗಿದೆ’ ಎಂದು ಹೇಳಿದ್ದಾರೆ.