ಜಯಾಗಾಗಿ ಶಿಲುಬೆಗೆ ಏರಿದ್ದ ಕರಾಟೆ ಮಾಸ್ಟರ್‌ ಹುಸೇನಿ ನಿಧನ

| Published : Mar 26 2025, 01:36 AM IST

ಜಯಾಗಾಗಿ ಶಿಲುಬೆಗೆ ಏರಿದ್ದ ಕರಾಟೆ ಮಾಸ್ಟರ್‌ ಹುಸೇನಿ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಎಐಎಡಿಎಂಕೆ ಅಧಿನಾಯಕಿ ಜೆ. ಜಯಲಲಿತಾ ಅವರು ಮತ್ತೆ ತಮಿಳ್ನಾಡು ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥಿಸಿ 6 ನಿಮಿಷ ಕಾಲ ಶಿಲುಬೆಗೇರಿದ್ದ ಖ್ತಾತ ಕರಾಟೆ ಮಾಸ್ಟರ್‌ ನಟ ಶಿಹಾನ್‌ ಹುಸೇನಿ (60) ಕ್ಯಾನ್ಸರ್‌ನಿಂದ ನಿಧನರಾದರು.

ಚೆನ್ನೈ: ಎಐಎಡಿಎಂಕೆ ಅಧಿನಾಯಕಿ ಜೆ. ಜಯಲಲಿತಾ ಅವರು ಮತ್ತೆ ತಮಿಳ್ನಾಡು ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥಿಸಿ 6 ನಿಮಿಷ ಕಾಲ ಶಿಲುಬೆಗೇರಿದ್ದ ಖ್ತಾತ ಕರಾಟೆ ಮಾಸ್ಟರ್‌ ನಟ ಶಿಹಾನ್‌ ಹುಸೇನಿ (60) ಕ್ಯಾನ್ಸರ್‌ನಿಂದ ನಿಧನರಾದರು.

‘ಹು’ ಎಂದೇ ಖ್ಯಾತರಾಗಿದ್ದ ಅವರು ಪವನ್‌ ಕಲ್ಯಾಣ್‌ ಸೇರಿ ಅನೇಕರಿಗೆ ಸಾಹಸ ಕಲೆ ಹೇಳಿಕೊಟ್ಟಿದ್ದರು. ನಿಧನಕ್ಕೆ ತಮಿಳು ಚಿತ್ರರಂಗ ಹಾಗೂ ಕರಾಟೆ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ.

ಜಯಾ ಅವರ ಅಪ್ರತಿಮ ಅಭಿಮಾನಿಯಾಗಿದ್ದ ಶಿಹಾನಿ, ಜಯಾ ಮತ್ತೆ ಸಿಎಂ ಆಗಲಿ ಎಂದು ಪ್ರಾರ್ಥಿಸಿ ಕೈಗೆ ಮೊಳೆ ಹೊಡೆದುಕೊಂಡು 6 ನಿಮಿಷ 7 ಸೆಕೆಂಡು ಕಾಲ ಏಸು ಕ್ರಿಸ್ತನ ರೀತಿ ಶಿಲುಬೆಗೇರಿದ್ದರು.

ಇನ್ನು ಜಯಾ ಅವರ ಮೇಲಿನ ಅಭಿಮಾನಕ್ಕಾಗಿ 101 ಕಾರುಗಳನ್ನು ಬರೀ ಬಲಗೈಯಿಂದ ಚಲಾಯಿಸಿ ಸಾಧನೆ ಮಾಡಿದ್ದರು. ಇದಾದ ಕೂಡಲೇ ಅದೇ ಬಲಗೈನಿಂದ 5000 ಟೈಲ್ಸ್ ಮತ್ತು 1000 ಇಟ್ಟಿಗೆಗಳನ್ನು ಒಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಪ್ರಯತ್ನಿಸಿದ್ದರು.ಆ ಕಾರ್ಯಕ್ರಮದ ನಂತರ ಅವರು ತಮ್ಮ ಸ್ವಂತ ರಕ್ತವನ್ನು ಬಳಸಿ, ಜಯಲಲಿತಾ ಅವರ ರಕ್ತ ಭಾವಚಿತ್ರ ಬಿಡಿಸಿದ್ದರು, ಇದರಿಂದಾಗಿ ಅವರಿಗೆ 3 ಲಕ್ಷ ರು. ನಗದು ಬಹುಮಾನ ಮತ್ತು ಕರಾಟೆ ಶಾಲೆಗೆ ರಾಜ್ಯ ಸರ್ಕಾರದಿಂದ ಅನುದಾಣ ದೊರಕಿತ್ತು.