ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪ ಹೊರಿಸಿ ಯೂಟ್ಯೂಬರ್‌ ಒಬ್ಬನಿಗೆ ನಟಿ ಸೋನಂ ಕಪೂರ್‌ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ನವದೆಹಲಿ: ತಮ್ಮ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪ ಹೊರಿಸಿ ಯೂಟ್ಯೂಬರ್‌ ಒಬ್ಬನಿಗೆ ನಟಿ ಸೋನಂ ಕಪೂರ್‌ ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಕಂಟೆಂಟ್‌ ಕ್ರಿಯೇಟರ್‌ ರಾಗಿಣಿ ಎಂಬುವರೇ ಆರೋಪ ಹೊತ್ತ ಯೂಟ್ಯೂಬರ್. ರಾಗಿಣಿ ಅವರು ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಸೋನಂ ಬಗ್ಗೆ ಅವಹೇಳನ ಮಾಡಿದ್ದರು. ಇದು ಸೋನಂ ಕಪೂರ್‌, ಅವರ ಪತಿ ಆನಂದ್‌ ಅಹುಜಾ ಮತ್ತು ಅವರ ಫ್ಯಾಷನ್‌ ಬ್ರ್ಯಾಂಡ್‌ಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದರೆ ಆರೋಪವನ್ನು ರಾಗಿಣಿ ನಿರಾಕರಿಸಿದ್ದು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಸೋನಂ ಹೇಳಿಕೆಯೊಂದರ ಬಗ್ಗೆ ಚರ್ಚಿಸಿದ್ದೆ ಅಷ್ಟೆ. ಅವರನ್ನು ಅವಮಾನಿಸಿಲ್ಲ’ ಎಂದಿದ್ದಾರೆ.