ಬ್ಯಾಡ್ಮಿಂಟನ್‌ ಪಟು ಮಥಿಯಾಸ್‌ ಜತೆ ತಾಪ್ಸಿ ವಿವಾಹ

| Published : Mar 26 2024, 01:16 AM IST

ಸಾರಾಂಶ

10 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಖ್ಯಾತ ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತು ಮಾಜಿ ಬ್ಯಾಡ್ಮಿಂಟನ್‌ ಆಟಗಾರ ಮಥಿಯಾಸ್‌ ಬೋ ಮಾ.23ರಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಬೈ: 10 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಖ್ಯಾತ ಬಾಲಿವುಡ್‌ ನಟಿ ತಾಪ್ಸಿ ಪನ್ನು ಮತ್ತು ಮಾಜಿ ಬ್ಯಾಡ್ಮಿಂಟನ್‌ ಆಟಗಾರ ಮಥಿಯಾಸ್‌ ಬೋ ಮಾ.23ರಂದು ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾಪ್ಸಿ ಮದುವೆ ಫೋಟೊಗಳನ್ನು ಲೇಖಕಿ ಕನಿಕಾ ಧಿಲ್ಲೋನ್ ಅವರು ‘ಮೇರೆಯಾರ್ ಕಿ ಶಾದಿ’ ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟ ಪಾವೈಲ್‌ ಗುಲಾಟಿಯು ಸಹ ತಮ್ಮ ಟ್ವೀಟರ್‌ ಖಾತೆಯಲ್ಲಿ ತಾಪ್ಸಿ, ಮಥಿಯಾಸ್‌ ಮದುವೆ ಫೋಟೊಗಳನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

ಅನುರಾಗ್‌ ಕಶ್ಯಪ್‌, ಹಾಸ್ಯನಟ ಅಭಿಲಾಷ್‌ ಥಾಪಿಯಾಲ್‌ ಸೇರಿದಂತೆ ಸ್ನೇಹಿತರು ಮತ್ತು ಕುಟುಂಬದವರು ಮದುವೆಯಲ್ಲಿ ಭಾಗವಹಿಸಿದ್ದರು.

2013ರಿಂದ ತಾಪ್ಸಿ ಹಾಗೂ ಮಥಿಯಾಸ್‌ ಸ್ನೇಹಿತರಾಗಿದ್ದರು.