ಮಲಯಾಳಂ ಚಿತ್ರರಂಗದ ಹಲವು ಖ್ಯಾತನಾಮ ನಟ, ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸೋಮವಾರ ಗಂಭೀರ ಆರೋಪ ಮಾಡಿದ್ದ ನಟಿ ಮಿನು ಮುನೀರ್‌ ಇದೀಗ 7 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ತಿರುವನಂತಪುರ: ಮಲಯಾಳಂ ಚಿತ್ರರಂಗದ ಹಲವು ಖ್ಯಾತನಾಮ ನಟ, ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸೋಮವಾರ ಗಂಭೀರ ಆರೋಪ ಮಾಡಿದ್ದ ನಟಿ ಮಿನು ಮುನೀರ್‌ ಇದೀಗ 7 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಮಲಯಾಳಂ ಚಿತ್ರರಂದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ನೇಮಿಸಿರುವ 7 ಜನರ ವಿಶೇ಼ಷ ತನಿಖಾ ತಂಡಕ್ಕೆ ಇ-ಮೇಲ್‌ ಮೂಲಕವೇ ಮಿನು ದೂರು ದಾಖಲಿಸಿದ್ದಾರೆ.ಹಾಲಿ ಸಿಪಿಎಂ ಶಾಸಕ ಕಂ ನಟ ಮುಕೇಶ್‌, ಜಯಸೂರ್ಯ, ಮಣಿಯನ್‌ಪಿಲ್ಲಾ ರಾಜು, ಇಡವೇಲು ಬಾಬು 2013ರಲ್ಲಿ ನನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು ಎಂದು ಸೋಮವಾರ ಮಿನು ಆರೋಪಿಸಿದ್ದರು. ಇವರ ಜೊತೆಗೆ ಇನ್ನು ಇತರೆ ಯಾವ ಮೂವರ ಹೆಸರನ್ನು ಅವರು ದೂರಿನಲ್ಲಿ ದಾಖಲಿಸಿದ್ದಾರೆ ಎಂದು ತಿಳಿದುಬಂದಿಲ್ಲ.

ಈಗಾಗಲೇ ನಿರ್ದೇಶಕ ರಂಜಿತ್‌, ನಟ ಸಿದ್ಧಿಕಿ, ಬಾಬುರಾಜ್‌, ಸೂರಜ್‌ ವೆಂಜರ್‌ಮೂಡು, ನಿರ್ಮಾಪಕರಾದ ತುಳಸೀದಾಸ್‌, ವಿ.ಕೆ.ಪ್ರಕಾಶ್‌ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.