ಅಡ್ವಾಣಿ ಮತ್ತೆಗೆ ದೆಹಲಿಆಸ್ಪತ್ರೆಗೆ ದಾಖಲು:ಆರೋಗ್ಯ ಸ್ಥಿತಿ ಸ್ಥಿರ

| Published : Aug 07 2024, 01:08 AM IST

ಅಡ್ವಾಣಿ ಮತ್ತೆಗೆ ದೆಹಲಿಆಸ್ಪತ್ರೆಗೆ ದಾಖಲು:ಆರೋಗ್ಯ ಸ್ಥಿತಿ ಸ್ಥಿರ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಬಿಜೆಪಿ ನಾಯಕ ಹಾಗೂ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ (96) ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ಮಂಗಳವಾರ ದಾಖಲು ಮಾಡಲಾಗಿದೆ.

ನವದೆಹಲಿ: ಹಿರಿಯ ಬಿಜೆಪಿ ನಾಯಕ ಹಾಗೂ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ (96) ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ಮಂಗಳವಾರ ದಾಖಲು ಮಾಡಲಾಗಿದೆ. ತೀವ್ರ ಬಳಲಿಕೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಜುಲೈನ ಮೊದಲ ವಾರದಲ್ಲಿಯೂ ಅಡ್ವಾಣಿಯವರ ಆರೋಗ್ಯ ಹದಗೆಟ್ಟಾಗ ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ವಿನೀತ್ ಸೂರಿಯ ವೀಕ್ಷಣೆಯಲ್ಲಿ ಅವರನ್ನು ಕೆಲ ದಿನ ಇರಿಸಿದ್ದು, ನಂತರ ಬಿಡುಗಡೆಗೊಳಿಸಲಾಗಿತ್ತು. ಅದಕ್ಕೂ ಮೊದಲು ಏಮ್ಸ್‌ಗೆ ದಾಖಲು ಮಾಡಲಾಗಿತ್ತು.