ಸಾರಾಂಶ
ಈಗಾಗಲೇ ಮಹಿಳೆಯರ ಶಿಕ್ಷಣ, ಸಂಗೀತ, ಹೊರ ಸಂಚಾರದ ಮೇಲೆ ನಾನಾ ರೀತಿಯ ನಿಷೇಧ ಹೇರಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ಮಾಧ್ಯಮಗಳು ಯಾವುದೇ ಜೀವಂತ ಪ್ರಾಣಿಗಳ ಫೋಟೋ, ವಿಡಿಯೋ ಪ್ರಸಾರದ ಮೇಲೆ ನಿಷೇಧ ಹೇರಿವೆ.
ಇಸ್ಲಾಮಬಾದ್: ಈಗಾಗಲೇ ಮಹಿಳೆಯರ ಶಿಕ್ಷಣ, ಸಂಗೀತ, ಹೊರ ಸಂಚಾರದ ಮೇಲೆ ನಾನಾ ರೀತಿಯ ನಿಷೇಧ ಹೇರಿರುವ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ, ಇದೀಗ ಮಾಧ್ಯಮಗಳು ಯಾವುದೇ ಜೀವಂತ ಪ್ರಾಣಿಗಳ ಫೋಟೋ, ವಿಡಿಯೋ ಪ್ರಸಾರದ ಮೇಲೆ ನಿಷೇಧ ಹೇರಿವೆ.
ಇಂಥದ್ದೊಂದು ಆದೇಶ ದೇಶದ ಹಲವು ಪ್ರದೇಶಗಳಲ್ಲಿ ಜಾರಿಗೆ ಬಂದಿದೆ. ಸರ್ಕಾರದ ಅಧೀನದಲ್ಲಿರುವ ಟೀವಿ ಮತ್ತು ಇತರೆ ಮಾಧ್ಯಮಗಳಲ್ಲಿ ಈ ನೀತಿ ಜಾರಿಗೆ ಬಂದಿದೆ.ನೈತಿಕತೆ ಕಾನೂನಿನ ಪಾಲನೆಗಾಗಿ ಈ ನಿಯಮ ಜಾರಿಗೆ ತರಲಾಗಿದೆ ಎಂದು ತಾಲಿಬಾನ್ ಸರ್ಕಾರ ಹೇಳಿಕೊಂಡಿದೆ. ಜೀವಂತ ಪ್ರಾಣಿಗಳ ಪಟ್ಟಿಯಲ್ಲಿ ಮಾನವರು, ಪ್ರಾಣಿಗಳು ಕೂಡಾ ಸೇರಿವೆ.