ಹಿಳೆಯರಿಗೆ ಶಿಕ್ಷಣ, ಉದ್ಯೋಗ, ಸಂಗೀತ, ಕಲೆ, ಕ್ರೀಡೆ ನಿರಾಕರಿಸಿದ್ದ ತಾಲಿಬಾನಿಗಳು ಇದೀಗ ಅವರ ಹೆಸರಿಗೂ ಸಂಚಕಾರ ತಂದಿದ್ದಾರೆ. ಸರ್ಕಾರದ ಕಡತಗಳಲ್ಲಿ ಮಹಿಳೆಯರ ಮೂಲ ಹೆಸರು ನಮೂದಿಸಬಾರದು ಎಂದು ತಾಲಿಬಾನಿಗಳು ಕಠೋರ ಆದೇಶ ಹೊರಡಿಸಿದ್ದಾರೆ.
ಹೀನ ಕೃತ್ಯ- ಹೆಸರು ಬಹಿರಂಗ ಧರ್ಮಬಾಹಿರ- ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನಿರಾಕರಣೆ
ಕಾಬೂಲ್: ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಸಂಗೀತ, ಕಲೆ, ಕ್ರೀಡೆ ನಿರಾಕರಿಸಿದ್ದ ತಾಲಿಬಾನಿಗಳು ಇದೀಗ ಅವರ ಹೆಸರಿಗೂ ಸಂಚಕಾರ ತಂದಿದ್ದಾರೆ. ಸರ್ಕಾರದ ಕಡತಗಳಲ್ಲಿ ಮಹಿಳೆಯರ ಮೂಲ ಹೆಸರು ನಮೂದಿಸಬಾರದು ಎಂದು ತಾಲಿಬಾನಿಗಳು ಕಠೋರ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಅವರ ಅಸ್ತಿತ್ವವನ್ನೇ ಪ್ರಶ್ನಿಸುವ ಕೆಲಸ ಮಾಡಿದ್ದಾರೆ. ಮಹಿಳೆಯರನ್ನು ಅವರ ಮೂಲ ಹೆಸರಿನ ಬದಲಾಗಿ, ಹಿರಿಯ ಮಹಿಳೆಯರನ್ನು ಸಾಮಾನ್ಯವಾಗಿ ಗುರುತಿಸುವ ‘ಬೀಬಿ’ ಎಂದು ನಮೂದಿಸುವಂತೆ ಆದೇಶಿಸಿದ್ದಾರೆ. ಕೆಲವು ಪ್ರಕರಣಗಳಲ್ಲಂತೂ ಮಹಿಳೆಯರನ್ನು ‘ಆಡು’, ‘ಹಸು’ ಎಂಬಿತ್ಯಾದಿ ಪ್ರಾಣಿಗಳ ಹೆಸರಿನ ಮೂಲಕ ಗುರುತಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ.ಮಹಿಳೆಯ ಹೆಸರು ಬಹಿರಂಗ ಧರ್ಮಬಾಹಿರ. ಹೀಗಾಗಿ ಅಧಿಕೃತ ದಾಖಲೆಗಳು, ಆಸ್ಪತ್ರೆ ಕಡತ ಮತ್ತು ಔಷಧ ಚೀಟಿಗಳಲ್ಲಿ ಮಹಿಳೆಯರ ಹೆಸರು ಬಳಸುವುದನ್ನು ನಿಲ್ಲಿಸಿ ಎಂದು ಬಾಲ್ಖ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮೂಲ ಹೆಸರು ಬಿಟ್ಟು ‘ಬೀಬಿ’ ಎಂದು ಕರೆಯುವುದು, ಮಹಿಳೆಯರನ್ನು ಅವಮಾನಕರವಾಗಿ ‘ಆಡು’ ಮತ್ತು ‘ಹಸು’ ಎಂದು ಕರೆಯುತ್ತಿರುವ ಬಗ್ಗೆ ಮಾನವ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಗುರುತನ್ನು ಅಳಿಸುವ ಕ್ರಮ ಇದಾಗಿದೆ. ಆಸ್ಪತ್ರೆ ದಾಖಲೆಗಳು ಮತ್ತು ಔಷಧ ಚೀಟಿಗಳಲ್ಲಿ ನೈಜ ಹೆಸರು ಇಲ್ಲದಿರುವುದರಿಂದ ಚಿಕಿತ್ಸೆಯಲ್ಲಿ ತಪ್ಪುಗಳಾಗುವ ಅಪಾಯವಿದೆ ಎಂದು ತಾಲಿಬಾನಿ ಮಹಿಳೆಯರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.ಇದರ ಜೊತೆಗೆ ಕೆಲವು ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಚಿಕಿತ್ಸೆ ನೀಡದಂತೆ, ಮಹಿಳೆಯರಿಗೆ ಪುರುಷರ ವೈದ್ಯರು ತಪಾಸಣೆ ಮಾಡಬಾರದು ಎಂದೂ ಉಗ್ರರು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.