ಶ್ರದ್ಧಾಳನ್ನು 35 ತುಂಡು ಮಾಡಿದ್ದ ಲಿವ್‌ ಇನ್‌ ಸಂಗಾತಿ ಅಫ್ತಾಬ್‌, ಬಿಷ್ಣೋಯಿ ಹಿಟ್‌ಲಿಸ್ಟಲ್ಲಿ

| Published : Nov 15 2024, 12:35 AM IST / Updated: Nov 15 2024, 04:55 AM IST

ಶ್ರದ್ಧಾಳನ್ನು 35 ತುಂಡು ಮಾಡಿದ್ದ ಲಿವ್‌ ಇನ್‌ ಸಂಗಾತಿ ಅಫ್ತಾಬ್‌, ಬಿಷ್ಣೋಯಿ ಹಿಟ್‌ಲಿಸ್ಟಲ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ರನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟು, ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಅಫ್ತಾಬ್‌ ಪೂನಾವಾಲಾ, ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯೊಂದು ಹೇಳಿದೆ.

ನವದೆಹಲಿ: ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ರನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟು, ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಅಫ್ತಾಬ್‌ ಪೂನಾವಾಲಾ, ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯೊಂದು ಹೇಳಿದೆ. ಇತ್ತೀಚೆಗೆ ಮಹಾರಾಷ್ಟ್ರದ ಎನ್‌ಸಿಪಿಯ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿ ಶುಭಂ ಲೋಂಕರ್‌ ತನಿಖೆ ವೇಳೆ ಈ ಮಾಹಿತಿ ಬಹಿರಂಗ ಪಡಿಸಿದ್ದಾನೆ ಎಂದು ಹೇಳಲಾಗಿದೆ.

ಶೇ.2.36ಕ್ಕೆ ತಲುಪಿದ ಸಗಟು ಹಣದುಬ್ಬರ: 4 ತಿಂಗಳಲ್ಲೇ ಗರಿಷ್ಠ

ನವದೆಹಲಿ: ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಪರಿಣಾಮ ಸಗಟು ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.2.36ಕ್ಕೆ ತಲುಪಿದೆ. ಇದು ಕಳೆದ 4 ತಿಂಗಳಲ್ಲೇ ಅಧಿಕವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇ.1.84ರಷ್ಟಿತ್ತು. ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಶೇ.11.53 ಇದ್ದ ಆಹಾರ ಸಾಮಗ್ರಿಗಳ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.13.54 ಏರಿಕೆಯಾಗಿದ್ದು, ಪರಿಣಾಮವಾಗಿ ಸಗಟು ಹಣದುಬ್ಬರ ಕೂಡ ಏರಿಕೆಯಾಗಿದೆ. ಅತ್ತ ಸೆಪ್ಟೆಂಬರ್‌ನಲ್ಲಿ ಶೇ.4.05 ಇದ್ದ ಇಂಧನ ಹಣದುಬ್ಬರ ಅಕ್ಟೋಬರ್‌ನಲ್ಲಿ ಶೇ.5.79 ಆಗಿದೆ. ಸಿದ್ಧ ಉತ್ಪನ್ನಗಳಲ್ಲಿ ಶೇ.1ರಷ್ಟಿದ್ದ ಹಣದುಬ್ಬರ ಶೇ.1.50 ತಲುಪಿದೆ.ಎರಡು ಹಿಂದೆ ಬಿಡುಗಡೆಯಾದ ಅಕ್ಟೋಬರ್‌ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.6.21ಕ್ಕೆ ಏರಿಕೆಯಾಗಿತ್ತು. ಇದು ಕಳೆದ 14 ತಿಂಗಳುಗಳಲ್ಲೇ ಗರಿಷ್ಠ ಮಟ್ಟವಾಗಿತ್ತು.

370 ವಿಧಿ ಮರುಸ್ಥಾಪನೆ ಬಗ್ಗೆ ನಾವೆಲ್ಲೂ ಹೇಳಿಲ್ಲ; ಅಮಿತ್‌ ಸುಳ್ಳು ಆರೋಪ: ಖರ್ಗೆ ಕಿಡಿ

ಪುಣೆ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ಮರುಸ್ಥಾಪಿಸುತ್ತೇವೆ ಎಂದು ಕಾಂಗ್ರೆಸಿಗರು ಎಲ್ಲೂ ಹೇಳಿಲ್ಲ. ಈ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಗುಡುಗಿದರು. ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರ್‍ಯಾಲಿಯಲ್ಲಿ ಅಮಿತ್‌ ಶಾ ಮಾತನಾಡುವಾಗ ಕಾಂಗ್ರೆಸಿಗರು 370ನೇ ವಿಧಿಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ವತಃ ಹೇಳಿದ್ದಾರೆ. ಆದರೆ ಎಲ್ಲಿ, ಯಾವಾಗ, ಯಾರು 370 ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಹೇಳಲಿ. ಇದು ಬಿಜೆಪಿಯ ಸುಳ್ಳು ಆರೋಪಿವೆಂದು ಎಂದು ಕಿಡಿಕಾರಿದ್ದಾರೆ.

ರಿಲಯನ್ಸ್‌- ಡಿಸ್ನಿ ವಿಲೀನ ಪೂರ್ಣ: ಹೊಸ ಕಂಪನಿಗೆ ನೀತಾ ಅಂಬಾನಿ ಮುಖ್ಯಸ್ಥೆ

ಮುಂಬೈ: ರಿಲಯನ್ಸ್‌ ಇಂಡಸ್ಟ್ರಿಸ್‌ ತನ್ನ ಮಾಧ್ಯಮ ವಿಭಾಗವನ್ನು ಭಾರತದಲ್ಲಿನ ವಾಲ್ಟ್‌ ಡಿಸ್ನಿ ಕಂಪನಿಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಿದೆ. ಇದರನ್ವಯ ಹೊಸ ಕಂಪನಿ ಸ್ಥಾಪನೆ ಮಾಡಲಾಗಿದ್ದು ಅದಕ್ಕೆ ರಿಲಯನ್ಸ್ ಮುಖ್ಯಸ್ಥ ಮುಕೇಶ್‌ ಅಂಬಾನಿ ಪತ್ನಿ ನೀತಾ ಅಂಬಾನಿ ಅಧ್ಯಕ್ಷೆಯಾಗಲಿದ್ದಾರೆ. ಹೊಸ ಕಂಪನಿ 70000 ಕೋಟಿ ರು. ಮೌಲ್ಯ ಹೊಂದಿರಲಿದ್ದು, ಭಾರತದ ಅತಿದೊಡ್ಡ ಮಾಧ್ಯಮ ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ. ಹೊಸ ಕಂಪನಿಯಲ್ಲಿ ರಿಲಯನ್ಸ್‌ ಶೇ.16.34, ವಯಾಕಾಮ್ 18 ಶೇ.46.82 ಮತ್ತು ಡಿಸ್ನಿ ಶೇ.36.84ರಷ್ಟು ಷೇರು ಪಾಲು ಹೊಂದಿರಲಿವೆ.