ಸಾರಾಂಶ
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬ್ರರಿಂಗ್ನಾನ್ ಎಂಬಲ್ಲಿ ಉಮಾ ಭಗವತಿ ಮಂದಿರದಲ್ಲಿ ರಾಮನವಮಿಯನ್ನು 34 ವರ್ಷ ಬಳಿಕ ಇದೇ ಮೊದಲ ಬಾರಿ ಆಚರಿಸಲಾಯಿತು.
ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬ್ರರಿಂಗ್ನಾನ್ ಎಂಬಲ್ಲಿ ಉಮಾ ಭಗವತಿ ಮಂದಿರದಲ್ಲಿ ರಾಮನವಮಿಯನ್ನು 34 ವರ್ಷ ಬಳಿಕ ಇದೇ ಮೊದಲ ಬಾರಿ ಆಚರಿಸಲಾಯಿತು. ಉಗ್ರಗಾಮಿಗಳ ಉಪಟಳದ ಕಾರಣ 34 ವರ್ಷ ಹಿಂದೆ ಅಂದರೆ 1990ರಲ್ಲಿ ದೇವಾಲಯವನ್ನು ಮುಚ್ಚಲಾಗಿತ್ತು.
ಭಯೋತ್ಪಾದನೆ ಕಡಿಮೆ ಆದ ಕಾರಣ ಕಳೆದ ವರ್ಷವಷ್ಟೇ ದೇವಾಲಯ ತೆರೆಯಲಾಗಿತ್ತು. ಈಗ 34 ವರ್ಷ ಬಳಿಕ ಮೊದಲ ಬಾರಿಗೆ ದೇವಾಲಯದಲ್ಲಿ ರಾಮನವಮಿ ಆಚರಿಸಲಾಯಿತು. ಹಿಂದೂ-ಮುಸ್ಲಿಮರು ಒಟ್ಟಿಗೇ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು ಎಂದು ದೇಗುಲದ ಮುಖ್ಯಸ್ಥ ಯಜಿನ್ ಭಟ್ ಹರ್ಷಿಸಿದ್ದಾರೆ.