ರಾಜ್ಯಪಾಲ ಹುದ್ದೆ ರಾಜೀನಾಮೆ ಬಳಿಕ ತಮಿಳ್‌ಸಾಯ್‌ ಬಿಜೆಪಿಗೆ ಸೇರ್ಪಡೆ ಲೋಕಸಭೆಗೆ ಸ್ಪರ್ಧೆ

| Published : Mar 21 2024, 01:03 AM IST

ರಾಜ್ಯಪಾಲ ಹುದ್ದೆ ರಾಜೀನಾಮೆ ಬಳಿಕ ತಮಿಳ್‌ಸಾಯ್‌ ಬಿಜೆಪಿಗೆ ಸೇರ್ಪಡೆ ಲೋಕಸಭೆಗೆ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ ಹಿಂದಷ್ಟೇ ತೆಲಂಗಾಣದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್‌ ಸೌಂದರ್ ರಾಜನ್ ಬುಧವಾರ ಸೇರ್ಪಡೆಯಾಗಿದ್ದಾರೆ.

ಚೆನ್ನೈ: ಎರಡು ದಿನಗಳ ಹಿಂದಷ್ಟೇ ತೆಲಂಗಾಣದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್‌ ಸೌಂದರ್ ರಾಜನ್ ಬುಧವಾರ ಸೇರ್ಪಡೆಯಾಗಿದ್ದಾರೆ. ಈ ನಡುವೆ ರಾಜ್ಯಪಾಲರಾಗಿದ್ದವರು ಮರಳಿ ರಾಜಕೀಯ ಪ್ರವೇಶ ಮಾಡಿದ್ದನ್ನು ಟೀಕಿಸಿದ ಡಿಎಂಕೆ ಮತ್ತು ಎಡಪಕ್ಷಗಳ ನಾಯಕರಿಗೆ ತಿರುಗೇಟು ನೀಡಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಸಾಂವಿಧಾನಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮರಳಿ ಸಾಮಾನ್ಯ ವ್ಯಕ್ತಿಯಂತೆ ಚುನಾವಣೆಗೆ ನಿಲ್ಲುವ ಅವಕಾಶ ಇರುವುದು ಕೇವಲ ಬಿಜೆಪಿಯಲ್ಲಿ ಮಾತ್ರ ಎಂದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ತಮಿಳ್‌ಸಾಯ್‌ ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.