ಏರಿಂಡಿಯಾ ಸಂಚಾರ ಸಂಪೂರ್ಣ ಸಹಜ

| Published : May 10 2024, 11:45 PM IST / Updated: May 11 2024, 09:08 AM IST

ಸಾರಾಂಶ

ಸಿಬ್ಬಂದಿಯ ಸಾಮೂಹಿಕ ರಜೆ ಕಾರಣ ಸಂಕಷ್ಟದಲ್ಲಿ ಸಿಲುಕಿದ್ದ ಏರಿಂಡಿಯಾ ಸಂಸ್ಥೆ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಭಾನುವಾರ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂಬೈ/ನವದೆಹಲಿ: ಸಿಬ್ಬಂದಿಯ ಸಾಮೂಹಿಕ ರಜೆ ಕಾರಣ ಸಂಕಷ್ಟದಲ್ಲಿ ಸಿಲುಕಿದ್ದ ಏರಿಂಡಿಯಾ ಸಂಸ್ಥೆ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಭಾನುವಾರ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ರಜೆ ಪಡೆದಿದ್ದ 300 ಸಿಬ್ಬಂದಿ ಪೈಕಿ ಅನೇಕರು ಕೆಲಸಕ್ಕೆ ಶುಕ್ರವಾರ ಮರಳಿದ್ದಾರೆ. ಆದರೂ ಶುಕ್ರವಾರ 75 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾನುವಾರ ಇದು ಸಂಪೂರ್ಣ ಸರಿ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರದಿಂದ ನಡೆಯುತ್ತಿರುವ ಈ ಸಿಬ್ಬಂದಿ ಮುಷ್ಕರದಿಂದಾಗಿ ಎಕ್ಸ್‌ಪ್ರೆಸ್‌ ಈಗಾಗಲೇ 170ಕ್ಕೂ ಹೆಚ್ಚು ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಶನಿವಾರವೂ ಸಹ 45 - 50 ವಿಮಾನ ರದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮುಷ್ಕರದಿಂದಾಗಿ ಸಂಸ್ಥೆಗೆ 30 ಕೋಟಿ ರು.ನಷ್ಟವಾಗಿದೆ.

ಗುರುವಾರ ಏರಿಂಡಿಯಾ ತನ್ನ ಮುಷ್ಕರನಿರತ 25 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ತನ್ನ ಆದೇಶ ವಾಪಸು ಪಡೆದಿತ್ತು.