ಸಾರಾಂಶ
ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ದೆಹಲಿ ಏಮ್ಸ್ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಪ್ರಯುಕ್ತ ಘೋಷಿಸಿದ್ದ ರಜೆಯ ಆದೇಶವನ್ನು ಹಿಂಪಡೆದಿದ್ದು, ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ.
ನವದೆಹಲಿ: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಅಂಗವಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯನ್ನು ಸೋಮವಾರ ಅರ್ಧ ದಿನ ಮುಚ್ಚಲು ನೀಡಿದ್ದ ಆದೇಶಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು ಸಂಸ್ಥೆ ಹಿಂಪಡೆದಿದೆ.
ಭಾನುವಾರ ಹೊರಡಿಸಲಾದ ಪರಿಷ್ಕೃತ ಆದೇಶದಲ್ಲಿ ‘ಹೊರರೋಗಿಗಳೂ ಸಹ ಸೂಕ್ತ ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಸೋಮವಾರ ಎಂದಿನಂತೆ ದೆಹಲಿ ಏಮ್ಸ್ ವೈದ್ಯರನ್ನು ಸಂದರ್ಶಿಸಬಹುದಾಗಿದೆ’ ಎಂದು ತಿಳಿಸಿದೆ.ಇದಕ್ಕೂ ಮೊದಲು ಅತಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ಮಧ್ಯಾಹ್ನ 2:30ರವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿತ್ತು.