ಮಸಾಜ್ ಮಾಡಿಸಿಕೊಳ್ಳುತ್ತಲೇಮೀಟಿಂಗ್‌ಗೆ ಹಾಜರಾದಏರ್‌ಏಷ್ಯಾ ಸಿಇಓ ಟೋನಿ!
KannadaprabhaNewsNetwork | Published : Oct 18 2023, 01:00 AM IST
ಮಸಾಜ್ ಮಾಡಿಸಿಕೊಳ್ಳುತ್ತಲೇಮೀಟಿಂಗ್‌ಗೆ ಹಾಜರಾದಏರ್‌ಏಷ್ಯಾ ಸಿಇಓ ಟೋನಿ!
ಸಾರಾಂಶ
ಏರ್‌ಏಷ್ಯಾ ಸಿಇಓ ಟೋನಿ ಫರ್ನಾಂಡಿಸ್ ಮಸಾಜ್ ಮಾಡಿಸಿಕೊಳ್ಳುತ್ತಲೇ ಮೀಟಿಂಗ್‌ನಲ್ಲಿ ಭಾಗವಹಿಸಿದ್ದಾರೆ
ಸಾಮಾನ್ಯವಾಗಿ ಸಭೆ, ಅಧಿಕೃತ ಭೇಟಿ ಅಂತಹ ಕಾರ್ಯಕ್ರಮಗಳಲ್ಲಿ ಟಿಪ್‌ಟಾಪ್ ಆಗಿ ಇಸ್ತ್ರಿ ಮಾಡಿಸಿದ ಅಂಗಿ ಪ್ಯಾಟ್, ಸೂಟ್ ಧರಿಸಿಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಏರ್‌ಏಷ್ಯಾ ಸಿಇಓ ಟೋನಿ ಫರ್ನಾಂಡಿಸ್ ಮಸಾಜ್ ಮಾಡಿಸಿಕೊಳ್ಳುತ್ತಲೇ ಮೀಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಇದನ್ನು ತಮ್ಮ ಲಿಂಕ್ಡ್ ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಜನರು ಏನ್ ಸ್ವಾಮಿ ಮೀಟಿಂಗ್‌ನಲ್ಲಿ ಅಂಗಿ ಹಾಕಿಕೊಳ್ಳಬಹುದಿತ್ತಲ್ಲ. ಇದು ಒಂದು ವರ್ಕ್ ಕಲ್ಚರ್ ಆ...? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ನಿಮ್ಮ ಖಾತೆಯನ್ನು ಯಾರಾದರು ಹ್ಯಾಕ್ ಮಾಡಿದ್ದಾರೆಯೇ ಎಂದು ಕೇಳಿದ್ದಾರೆ.