ಸಿಬ್ಬಂದಿ ಜೊತೆ ದುರ್ವರ್ತನೆ: ರೆಲಿಗೇರ್‌ ಮುಖ್ಯಸ್ಥೆಯನ್ನುಹೊರಹಾಕಿದ ಏರಿಂಡಿಯಾ

| Published : Mar 08 2024, 01:47 AM IST

ಸಿಬ್ಬಂದಿ ಜೊತೆ ದುರ್ವರ್ತನೆ: ರೆಲಿಗೇರ್‌ ಮುಖ್ಯಸ್ಥೆಯನ್ನುಹೊರಹಾಕಿದ ಏರಿಂಡಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ವಿಮಾನದ ಕ್ಯಾಬಿನ್‌ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಕಾರಣದಿಂದಾಗಿ ರೆಲಿಗೇರ್‌ ಎಂಟರ್‌ಪ್ರೈಸಸ್‌ ಸಂಸ್ಥೆಯ ಮುಖ್ಯಸ್ಥೆ ರಶ್ಮಿ ಸಲುಜಾ ಅವರನ್ನು ಏರಿಂಡಿಯಾ ಸಿಬ್ಬಂದಿಯು, ದೆಹಲಿಯಲ್ಲೇ ಇಳಿಸಿ ನಿರ್ಗಮಿಸಿದ ಘಟನೆ ಗುರುವಾರ ನಡೆದಿದೆ.

ನವದೆಹಲಿ: ವಿಮಾನದ ಕ್ಯಾಬಿನ್‌ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಕಾರಣದಿಂದಾಗಿ ರೆಲಿಗೇರ್‌ ಎಂಟರ್‌ಪ್ರೈಸಸ್‌ ಸಂಸ್ಥೆಯ ಮುಖ್ಯಸ್ಥೆ ರಶ್ಮಿ ಸಲುಜಾ ಅವರನ್ನು ಏರಿಂಡಿಯಾ ಸಿಬ್ಬಂದಿಯು, ದೆಹಲಿಯಲ್ಲೇ ಇಳಿಸಿ ನಿರ್ಗಮಿಸಿದ ಘಟನೆ ಗುರುವಾರ ನಡೆದಿದೆ.

ಪ್ರಯಾಣಿಕರೊಬ್ಬರು ಲಂಡನ್‌ಗೆ ಹೊರಟಿದ್ದ ಏರಿಂಡಿಯಾ 161 ವಿಮಾನ ಏರುತ್ತಲೇ ಕ್ಯಾಬಿನ್‌ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದರು. ಹೀಗಾಗಿ ಕ್ಯಾಪ್ಟನ್‌ ಆದೇಶದ ಮೇಲೆ ಅವರನ್ನು ವಿಮಾನದಿಂದ ಹೊರ ಹಾಕಲಾಯಿತು. ಬಳಿಕ ಅವರ ಪ್ರಯಾಣದ ಮಹತ್ವವನ್ನು ಅರಿತು ಬದಲಿ ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು ಎಂದು ಏರಿಂಡಿಯಾ ಹೇಳಿದೆ. ಆದರೆ ಹೆಸರನ್ನು ವಿಮಾನದಲ್ಲಿದ್ದ ಮೂಲಗಳು ಬಹಿರಂಗಪಡಿಸಿವೆ.