ಭಾರತಕ್ಕೆ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌

| Published : Mar 12 2025, 12:50 AM IST

ಸಾರಾಂಶ

ಭಾರತದಲ್ಲಿ ಉಪಗ್ರಹ ಆಧರಿತ ವೇಗದ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಸಲುವಾಗಿ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌, ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ ಜತೆ ಪಾಲುದಾರಿಕೆಗೆ ಮಾಡಿಕೊಂಡಿರುವುದಾಗಿ ತಿಳಿಸಿದೆ. ಈ ಮೂಲಕ ಭಾರತದಲ್ಲಿ ಶೀಘ್ರ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಪಿಟಿಐ ನವದೆಹಲಿ

ಈ ಒಪ್ಪಂದದಿಂದ, ಭಾರತದಲ್ಲಿ ಸ್ಟಾರ್‌ಲಿಂಕ್‌ನ ಉಪಗ್ರಹ ಸಂವಹನ ಆಧಾರಿತ ಸೇವೆಗಳನ್ನು ಮಾರಾಟ ಮಾಡುವ ಅಧಿಕಾರವನ್ನು ಸ್ಪೇಸ್‌ಎಕ್ಸ್ ಪಡೆಯಲಿದೆ. ಇದರಿಂದಾಗಿ, ಏರ್‌ಟೆಲ್‌ ಮತ್ತು ಸ್ಪೇಸ್‌ಎಕ್ಸ್‌ ಜೊತೆಗೂಡಿ, ಸ್ಟಾರ್‌ಲಿಂಕ್‌ ಸೇವೆಗಳನ್ನು ಏರ್‌ಟೆಲ್‌ ಮೂಲಕ ಉದ್ಯಮಿಗಳಿಗೆ, ಸಮುದಾಯ, ಶಾಲೆ, ಆರೋಗ್ಯ ಕೇಂದ್ರಗಳನ್ನು ಪರಸ್ಪರ ಸಂಪರ್ಕಿಸಲು ಸಹಾಯವಾಗುತ್ತದೆ.

‘ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ ಏರ್‌ಟೆಲ್ ಗ್ರಾಹಕರಿಗೂ ಸ್ಟಾರ್‌ಲಿಂಕ್ ಸೇವೆ ನೀಡಲು ಸ್ಪೇಸ್‌ಎಕ್ಸ್‌ನೊಂದಿಗೆ ಕೆಲಸ ಮಾಡುವುದು ಮಹತ್ವದ ಮೈಲುಗಲ್ಲಾಗಿದ್ದು, ಮುಂದಿನ ಪೀಳಿಗೆಯ ಉಪಗ್ರಹ ಸಂಪರ್ಕಕ್ಕೆ ಕಂಪನಿಯ ಬದ್ಧತೆಯನ್ನು ಪ್ರದರ್ಶಿಸುತ್ತದೆ’ ಎಂದು ಭಾರತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರಾದ ಗೋಪಾಲ್ ವಿಟ್ಟಲ್ ಹೇಳಿದರು.

ಭಾರತದಲ್ಲಿ ಇಂಟರ್ನೆಟ್‌ ಸೇವೆ ಆರಂಭಿಸಲು ಸ್ಟಾರ್‌ಲಿಂಕ್‌ ಬಹುದಿನಗಳಿಂದ ಸರ್ಕಾರದ ಅನುಮತಿಗೆ ಕಾಯುತ್ತಿತ್ತು.