ದೇಶದ ಸಂಸತ್‌ ಭವನ, ದೆಹಲಿಯಲ್ಲಿರುವ ವಸಂತ ವಿಹಾರ ಮತ್ತು ದೆಹಲಿ ವಿಮಾನ ನಿಲ್ದಾಣ ವರೆಗಿನ ಸುತ್ತಮುತ್ತಲಿನ ಪ್ರದೇಶವೆಲ್ಲಾ ವಕ್ಫ್‌ ಆಸ್ತಿಗೆ ಸೇರಿದೆ ಎಂದು ಮಾಜಿ ಸಂಸದ, ಎಐಯುಡಿಎಫ್‌ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗುವಾಹಟಿ: ದೇಶದ ಸಂಸತ್‌ ಭವನ, ದೆಹಲಿಯಲ್ಲಿರುವ ವಸಂತ ವಿಹಾರ ಮತ್ತು ದೆಹಲಿ ವಿಮಾನ ನಿಲ್ದಾಣ ವರೆಗಿನ ಸುತ್ತಮುತ್ತಲಿನ ಪ್ರದೇಶವೆಲ್ಲಾ ವಕ್ಫ್‌ ಆಸ್ತಿಗೆ ಸೇರಿದೆ ಎಂದು ಮಾಜಿ ಸಂಸದ, ಎಐಯುಡಿಎಫ್‌ ಮುಖ್ಯಸ್ಥ ಬದ್ರುದ್ದೀನ್‌ ಅಜ್ಮಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗುವಾಹಟಿಯಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ವಿಶ್ವಾದ್ಯಂತ ವಕ್ಫ್‌ಗೆ ಸೇರಿದ ಆಸ್ತಿಗಳ ಪಟ್ಟಿ ಬಿಡುಗಡೆಯಾಗಿದೆ. ದೇಶದ ಸಂಸತ್‌ ಭವನ, ವಸಂತ ವಿಹಾರ ಮತ್ತು ದೆಹಲಿ ವಿಮಾನ ನಿಲ್ದಾಣದ ಮಾರ್ಗದಲ್ಲಿನ ಸುತ್ತಮುತ್ತಲಿನ ಪ್ರದೇಶವೆಲ್ಲಾ ವಕ್ಫ್‌ಗೆ ಸೇರಿದೆ. ವಿಮಾನ ನಿಲ್ದಾಣವೂ ವಕ್ಫ್‌ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಜನ ಹೇಳುತ್ತಾರೆ. ವಕ್ಫ್‌ ಅನುಮತಿ ಇಲ್ಲದೆ ಆಸ್ತಿಯನ್ನು ಬಳಸುವುದು ತಪ್ಪು ಎಂದು ಬದ್ರುದ್ದೀನ್ ಹೇಳಿದರು.