ಸಾರಾಂಶ
ತಮಿಳು ನಟ ಅಜಿತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ತಂಡ ಜನರಲ್ ಚೆಕಪ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಚೆನ್ನೈ: ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಅವರ ಗುರುವಾರ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆದರೆ ಸಾಮಾನ್ಯ ಆರೋಗ್ಯ ಚೆಕ್‌ಅಪ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಜಿತ್ ವಕ್ತಾರ ಹೇಳಿದ್ದಾರೆ.ಅಜಿತ್ ಬುಧವಾರ ಸಂಜೆ ಚೆನ್ನೈನ ಅಪೋಲೊ ಆಸ್ಪತ್ರೆಗೆ ಹೊರ ರೋಗಿ ವಿಭಾಗಕ್ಕೆ ತೆರಳಿದರು. ಗುರುವಾರ ಆಸ್ಪತ್ರೆಗೆ ದಾಖಲಾದರು.
ಈ ಸುದ್ದಿ ತಿಳಿದೊಡನೆ ಅವರ ಅಭಿಮಾನಿಗಳಲ್ಲಿ ಭಾರಿ ಆತಂಕ ಸೃಷ್ಟಿಯಾಯಿತು. ಕೆಲವರು ಅಜಿತ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಹರಡಿಸಿದರು.ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿದ ಅಜಿತ್ ತಂಡ, ಅಜಿತ್ ಆರೋಗ್ಯವಾಗಿದ್ದಾರೆ.
ತಮ್ಮ ಆರೋಗ್ಯ ಪರೀಕ್ಷೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದಾರೆ.