ಅಜಿತ್‌ ವಿರುದ್ಧ ಅವರ ಅಣ್ಣನ ಮಗ ಯುಗೇಂದ್ರ ಪವಾರ್‌ ಕಣಕ್ಕಿಳಿಸಲು ಶರದ್ ಬಣ ತೀರ್ಮಾನ

| Published : Oct 25 2024, 12:59 AM IST / Updated: Oct 25 2024, 05:00 AM IST

ಸಾರಾಂಶ

ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್ ಬಣದ ಎನ್‌ಸಿಪಿಗೆ ತನ್ನ ಅಂತಿಮ ಆದೇಶದವರೆಗೆ ಗಡಿಯಾರ ಚಿಹ್ನೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ಮುಂಬೈ: ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್ ಬಣದ ಎನ್‌ಸಿಪಿಗೆ ತನ್ನ ಅಂತಿಮ ಆದೇಶದವರೆಗೆ ಗಡಿಯಾರ ಚಿಹ್ನೆ ಬಳಸಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಇದರಿಂದ ಈ ಚಿಹ್ನೆಗೆ ಬೇಡಿಕೆ ಇಟ್ಟಿದ್ದ ಶರದ್ ಪವಾರ್‌ ಎನ್‌ಸಿಪಿಗೆ ಹಿನ್ನಡೆ ಆಗಿದೆ. 

ಈ ನಡುವೆ, ಬಾರಾಮತಿಯಲ್ಲಿ ಅಜಿತ್‌ ವಿರುದ್ಧ ಅವರ ಅಣ್ಣನ ಮಗ ಯುಗೇಂದ್ರ ಪವಾರ್‌ ಕಣಕ್ಕಿಳಿಸಲು ಶರದ್ ಬಣ ನಿಧರಿಸಿದೆ. ಈ ನಡುವೆ, ಕಾಂಗ್ರೆಸ್‌ ಪಕ್ಷ 48 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ನಾನಾ ಪಟೋಲೆ, ಪೃಥ್ವಿರಾಜ್ ಚವಾಣ್‌, ಬಾಳಾಸಾಹೇಬ್‌ ಥೋರಟ್‌ ಸ್ಪರ್ಧಿಸಲಿದ್ದಾರೆ.