ವಸಂತ ಪಂಚಮಿ ಪುಣ್ಯಸ್ನಾನ ಬಳಿಕ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಕುಂಭಕ್ಕೆ ಅಖಾಡಗಳ ವಿದಾಯ ಶುರು

| N/A | Published : Feb 06 2025, 11:46 PM IST / Updated: Feb 07 2025, 05:28 AM IST

ಸಾರಾಂಶ

ಇಡೀ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಮಹಾಕುಂಭಮೇಳ ಇನ್ನೂ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ ಕುಂಭಮೇಳದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ 13 ಅಖಾಡಗಳು, ಕುಂಭಮೇಳದಿಂದ ಜಾಗಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿವೆ.

ಮಹಾಕುಂಭ ನಗರ: ಇಡೀ ಜಗತ್ತಿನ ಆಕರ್ಷಣೆಯ ಕೇಂದ್ರವಾಗಿರುವ ಮಹಾಕುಂಭಮೇಳ ಇನ್ನೂ ಭಾರೀ ಪ್ರಮಾಣದಲ್ಲಿ ಭಕ್ತರನ್ನು ಆಕರ್ಷಿಸುತ್ತಿರುವ ಹೊತ್ತಿನಲ್ಲೇ ಕುಂಭಮೇಳದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ 13 ಅಖಾಡಗಳು, ಕುಂಭಮೇಳದಿಂದ ಜಾಗಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿವೆ.

ಒಟ್ಟು 13 ಅಖಾಡಗಳು, ಕುಂಭಮೇಳದಲ್ಲಿನ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಮುಕ್ತಾಯಗೊಳಿಸಿ ಸ್ಥಳ ಖಾಲಿ ಮಾಡುವ ಪ್ರಕ್ರಿಯೆ ಭಾಗವಾಗಿ ಮೊದಲ ಹಂತದಲ್ಲಿ ತಮ್ಮ ತಮ್ಮ ಧ್ವಜಗಳನ್ನು ಕೆಳಗಿಳಿಸಲು ಆರಂಭಿಸಿದ್ದಾರೆ. ಜೊತೆಗೆ ಕೆಲವು ಅಖಾಡಗಳು ಕಢಿ ಪಕೋಡಾ ಭೋಜನ ಕೂಡಾ ಮಾಡುವ ಮೂಲಕ ತೆರುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ವಸಂತ ಪಂಚಮಿಯ ಪವಿತ್ರ ಸ್ನಾನ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ನಾಗಾ ಸಾಧುಗಳು ಕುಂಭಮೇಳ ಯಾತ್ರೆ ಮುಕ್ತಾಯಗೊಳಿಸಿದ್ದಾರೆ.

ಇನ್ನು ಕೆಲವು ನಾಗಾ ಸಾಧುಗಳು ಕಾಶ್ಮೀರ ಪ್ರವಾಸ, ಕಾಶಿ ವಿಶ್ವನಾಥನ ದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕಂಡಿದ್ದಾರೆ. ಜ.13ರಂದು ಆರಂಭವಾದ ಕುಂಭಮೇಳ ಮಾ.26ರವರೆಗೂ ಇದೆ.