ವಕ್ಫ್‌ ತಿದ್ದುಪಡಿ ಮಸೂದೆ ಕುರಿತ ಚರ್ಚೆಯ ವೇಳೆ ಬಿಜೆಪಿ ಅಧ್ಯಕ್ಷರ ಆಯ್ಕೆಯ ವಿಚಾರವು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆ ಕುರಿತ ಚರ್ಚೆಯ ವೇಳೆ ಬಿಜೆಪಿ ಅಧ್ಯಕ್ಷರ ಆಯ್ಕೆಯ ವಿಚಾರವು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅಖಿಲೇಶ್‌, ‘ವಿಶ್ವದಲ್ಲೇ ಅತಿ ದೊಡ್ಡ ರಾಜಕೀಯ ಪಕ್ಷವೆಂದು ಕರೆದುಕೊಳ್ಳುವ ಬಿಜೆಪಿಗೆ ರಾಷ್ಟ್ರಾಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೇ ಆಗುತ್ತಿಲ್ಲ’ ಎಂದರು.

ಇದಕ್ಕೆ ನಗುಮೊಗದಿಂದಲೇ ಉತ್ತರಿಸಿದ ಶಾ, ‘ಈ ಸದನದಲ್ಲಿರುವ ಪಕ್ಷಗಳ ರಾಷ್ಟ್ರಾಧ್ಯಕ್ಷರು ಕೇವಲ 5 ಪರಿವಾರಗಳಿಂದ ಆಯ್ಕೆಯಾದವರು. ನೀವೂ(ಅಖಿಲೇಶ್‌) ಸಹ ಇನ್ನು 25 ವರ್ಷ ಇದೇ ಹುದ್ದೆಯಲ್ಲಿರಲಿದ್ದೀರಿ. ಆದರೆ ನಾವು 12-13 ಕೋಟಿ ಸದಸ್ಯರನ್ನು ಪರಿಗಣಿಸಬೇಕಾಗಿರುವುದರಿಂದ ಸಹಜವಾಗಿ ಅಧಿಕ ಸಮಯ ತಗುಲುತ್ತದೆ’ ಎಂದರು.