ಸಾರಾಂಶ
ಲಖನೌ: ಉತ್ತರ ಪ್ರದೇಶ ಮದರಸಾ ಶಿಕ್ಷಣ ಕಾಯ್ದೆ-2004ನ್ನು ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮದರಸಾಗಳಲ್ಲಿ ಇಸ್ಲಾಮಿಕ್ ಶಿಕ್ಷಣದ ಜತೆಗೆ ಸಾಮಾನ್ಯ ಶಾಲೆಗಳಲ್ಲೂ ದಾಖಲು ಮಾಡಲು ಸೂಕ್ತ ವ್ಯವಸ್ಥೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಕುರಿತು ತೀರ್ಪು ನೀಡಿದ ನ್ಯಾ ವಿವೇಕ್ ಚಚೌಧರಿ ನೇತೃತ್ವದ ದ್ವಿಸದಸ್ಯ ಪೀಠ, ‘ಮದರಸಾ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಮುಸಲ್ಮಾನರಿಗೆ ವಿದ್ಯಾರ್ಥಿಗಳಿಗೆ ಅವರವರ ಧರ್ಮದ ಶಿಕ್ಷಣ ನೀಡಲಾಗುತ್ತದೆ. ಆದರೆ ಅವರಿಗೆ ಸ್ಪರ್ಧಾತ್ಮಕ ಶಿಕ್ಷಣವನ್ನೂ ಇದರ ಜತೆಗೆ ನೀಡುವುದನ್ನು ನಿರ್ಬಂಧಿಸಿರುವುದು ಸಲ್ಲದು.
ಇದು ಸಮಾನತೆಯ ಉಲ್ಲಂಘನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯು ಕಾನೂನಿನ ಕಾಯ್ದೆ ಅಮಾನ್ಯ’ ಎಂದು ತೀರ್ಪು ನೀಡಿ ಆದೇಶಿಸಿದರು.
ಈ ತೀರ್ಪು ರಾಜ್ಯದ ಸುಮಾರು 25 ಸಾವಿರ ಮದರಸಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿವೆ.
ಏನಿದು ಪ್ರಕರಣ?:ಅನ್ಷುಮನ್ ಸಿಂಗ್ ರಾಥೋರ್ ಎಂಬುವವರು ಉತ್ತರ ಪ್ರದೇಶದಲ್ಲಿರುವ ಮದರಸಾ ಶಿಕ್ಷಣ ಮಂಡಳಿಗಿರುವ ಸಾಂವಿಧಾನಿಕ ಮಾನ್ಯತೆಯನ್ನು ಕುರಿತು ಪ್ರಶ್ನಿಸಿ, ಇಲ್ಲಿನ ಮಕ್ಕಳನ್ನು ಸಾಮಾನ್ಯ ಶಿಕ್ಷಣದಿಂದ ವಂಚಿತ ಮಾಡಲಾಗಿದ್ದು ಜಾತ್ಯತೀತ ತತ್ವಕ್ಕೆ ವಿರುದ್ಧ ಎಂದಿದ್ದರು.