ಸಾರಾಂಶ
ನವದೆಹಲಿ : ಅಶ್ಲೀಲತೆಯನ್ನು ಪ್ರಸಾರ ಮಾಡುತ್ತಿದ್ದ ಉಲ್ಲು, ಎಎಲ್‌ಟಿಟಿ, ಡಿಸಿಫ್ಲಿಕ್ಸ್ ಸೇರಿದಂತೆ ಒಟ್ಟು 25 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ.
ಈ ಪ್ಲಾಟ್‌ಫಾರ್ಮ್‌ಗಳಿಗೆ ಜನರು ಭೇಟಿ ನೀಡದಂತೆ ತಡೆಯಬೇಕೆಂದು ಮಧ್ಯವರ್ತಿ ಸಂಸ್ಥೆಗಳಿಗೆ ಅಧಿಕೃತ ನಿರ್ದೇಶನ ನೀಡಲಾಗಿದೆ.‘ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈಂಗಿಕ ವ್ಯಂಗ್ಯನುಡಿಗಳು, ದೀರ್ಘ ಲೈಂಗಿಕ ದೃಶ್ಯಗಳನ್ನು ಸಾಮಾಜಿಕವಾಗಿ ಯಾವುದೇ ಸಂದೇಶ ನೀಡದೆ ಪ್ರಸಾರ ಮಾಡಲಾಗುತ್ತಿತ್ತು. ಕಳೆದ ವರ್ಷದಿಂದ ಇವುಗಳ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಇವುಗಳನ್ನು ನಿಷೇಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದಕ್ಕೆ ನಿಷೇಧ?:
ಎಎಲ್‌ಟಿಟಿ, ಉಲ್ಲು, ಬಿಗ್ ಶಾಟ್ಸ್, ಡೆಸಿಫ್ಲಿಕ್ಸ್, ಬೂಮೆಕ್ಸ್, ನವರಸ ಲೈಟ್, ಗುಲಾಬ್, ಕಂಗನ್, ಬುಲ್, ಜಲ್ವಾ, ಶೋಹಿಟ್, ವಾವ್ ಎಂಟರ್ಟೈನ್ಮೆಂಟ್, ಲುಕ್ ಎಂಟರ್ಟೈನ್ಮೆಂಟ್, ಹಿಟ್ಪ್ರೈಮ್, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್ಎಕ್ಸ್ ವಿಐಪಿ, ಹಲ್ಚುಲ್, ಮೂಡ್ಎಕ್ಸ್, ನಿಯಾನ್ಎಕ್ಸ್ ವಿಐಪಿ, ಫ್ಯೂಗಿ, ಮೊಜ್ಫ್ಲಿಕ್ಸ್ ಮತ್ತು ಟ್ರಿಫ್ಲಿಕ್ಸ್ ಆ್ಯಪ್‌ಗಳಿಗೆ ನಿಷೇಧ ಹೇರಲಾಗಿದೆ.