ಅಮೆಜಾನ್‌ನಲ್ಲಿ ಮಂದಿರ ಪ್ರಸಾದ: ನೋಟಿಸ್‌ ಬೆನ್ನಲ್ಲೇ ಪ್ರಸಾದ ಔಟ್‌

| Published : Jan 21 2024, 01:33 AM IST / Updated: Jan 21 2024, 07:31 AM IST

ಅಮೆಜಾನ್‌ನಲ್ಲಿ ಮಂದಿರ ಪ್ರಸಾದ: ನೋಟಿಸ್‌ ಬೆನ್ನಲ್ಲೇ ಪ್ರಸಾದ ಔಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆ ಮಂದಿರ ಪ್ರಸಾದ ಹೆಸರಲ್ಲಿ ಸಿಹಿ ತಿಂಡಿ ಮಾರಾಟ ಮಾಡುತ್ತಿದ್ದ ಅಮೆಜಾನ್‌ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ನೋಟಿಸ್‌ ನೀಡಿದೆ. ನೋಟಿಸ್‌ ಬೆನ್ನಲ್ಲೇ ಎಲ್ಲ ತಿಂಡಿ ತೆಗೆದು ಹಾಕಿದ ಅಮೆಜಾನ್‌; ನಾವು ಥರ್ಡ್‌ ಪಾರ್ಟಿ, ನಮಗೆ ಈ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ನವದೆಹಲಿ: ‘ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಸಾದ’ ಎಂಬ ಹೆಸರಿನಲ್ಲಿ ಆನ್‌ಲೈನ್‌ ವ್ಯಾಪಾರ ಸಂಸ್ಥೆ ಅಮೆಜಾನ್‌ನಲ್ಲಿ ಲಾಡು ಸೇರಿದಂತೆ ಹಲವು ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅಮೆಜಾನ್‌ಗೆ ನೋಟಿಸ್‌ ಜಾರಿ ಮಾಡಿದೆ. 

ಇದರ ಬೆನ್ನಲ್ಲೇ ತಾನು ಮಾರಾಟ ಮಾಡುತ್ತಿದ್ದ ಮಂದಿರ ಪ್ರಸಾದ ಖಾದ್ಯಗಳನ್ನು ಅಮೆಜಾನ್ ತೆಗೆದು ಹಾಕಿದೆ.

‘ಘೀ ಬೂಂದಿ ಲಾಡು, ಖೋಯಾ ಖೋಬಿ ಲಾಡು, ರಘುಪತಿ ಘೀ ಲಾಡು ಮತ್ತು ದೇಸಿ ಹಸುವಿನ ಹಾಲಿನ ಪೇಡ’ ಎಂಬ ಹಲವು ಸಿಹಿ ಖಾದ್ಯಗಳನ್ನು ‘ರಾಮ ಮಂದಿರ ಪ್ರಸಾದ’ ಎಂದು ನಮೂದಿಸಿ, ಅವುಗಳಿಗೆ ಬೆಲೆ ನಿಗದಿ ಮಾಡಿ ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಏಳು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸಿಸಿಪಿಎ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್‌ ‘ಅಮೆಜಾನ್‌ ಯಾವುದೇ ವಸ್ತುವಿನ ಮಾರಾಟಗಾರ ಅಲ್ಲ. ಅದು ಮಾರಾಟಗಾರ ಮತ್ತು ಗ್ರಾಹಕನ ಮಧ್ಯೆ ಇರುವ ಮೂರನೇ ವ್ಯಕ್ತಿ. ಕೆಲ ಮಾರಾಟಗಾರರಿಂದ ಗ್ರಾಹಕರನ್ನು ತಪ್ಪುದಾರಿಗೆಳೆಯುವ ತಂತ್ರ ನಡೆದಿದೆ. ಈ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದಿದೆ.