ಅಮೆಜಾನ್‌ನಲ್ಲಿ 30000 ಉದ್ಯೋಗಿಗಳಿಗೆ ಕೊಕ್‌

| Published : Oct 29 2025, 01:15 AM IST

ಸಾರಾಂಶ

ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಬಳಕೆ ಹೆಚ್ಚಾದ ಬೆನ್ನಲ್ಲೇ ಟೆಕ್‌ ಕಂಪನಿಗಳ ಉದ್ಯೋಗ ಕಡಿತ ಪರ್ವ ಮುಂದುವರೆದಿದ್ದು ಅಮೆಜಾನ್‌ ಜಾಗತಿಕವಾಗಿ 30 ಸಾವಿರ ಉದ್ಯೋಗಿಗಳಿಗೆ ಕೊಕ್‌ ನೀಡುವುದಕ್ಕೆ ಮುಂದಾಗಿದೆ. ಇದು 2022ರ ಬಳಿಕದ ಅತಿದೊಡ್ಡ ಉದ್ಯೋಗ ಕಡಿತವಾಗಿದೆ.

- 2022ರ ಬಳಿಕದ ಅತಿದೊಡ್ಡ ವಜಾ ಪ್ರಕ್ರಿಯೆಸ್ಯಾನ್‌ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆ ಬಳಕೆ ಹೆಚ್ಚಾದ ಬೆನ್ನಲ್ಲೇ ಟೆಕ್‌ ಕಂಪನಿಗಳ ಉದ್ಯೋಗ ಕಡಿತ ಪರ್ವ ಮುಂದುವರೆದಿದ್ದು ಅಮೆಜಾನ್‌ ಜಾಗತಿಕವಾಗಿ 30 ಸಾವಿರ ಉದ್ಯೋಗಿಗಳಿಗೆ ಕೊಕ್‌ ನೀಡುವುದಕ್ಕೆ ಮುಂದಾಗಿದೆ. ಇದು 2022ರ ಬಳಿಕದ ಅತಿದೊಡ್ಡ ಉದ್ಯೋಗ ಕಡಿತವಾಗಿದೆ.

ಕೋವಿಡ್‌ ಸಮಯದಲ್ಲಿ ಹೆಚ್ಚಿನ ನೌಕರರ ನೇಮಕಾತಿಯಿಂದ ಆದ ವೆಚ್ಚವನ್ನು ಸರಿದೂಗಿಸಲು ಮತ್ತು ಹೆಚ್ಚು ಹೆಚ್ಚು ಎಐ ತಂತ್ರಜ್ಞಾನ ಬಳಕೆ ಮೂಲಕ ಸೇವೆ ನೀಡಲು ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಅಮೆಜಾನ್ ಜಾಗತಿಕವಾಗಿ 15 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಆ ಪೈಕಿ ಶೇ.10 ರಷ್ಟು ನೌಕರರಿಗೆ ಕಂಪನಿಯಿಂದ ಗೇಟ್‌ ಪಾಸ್‌ ನೀಡಿದೆ. ಕಳೆದ ಎರಡು ವರ್ಷಗಳಿಂದ ಅಮೆಜಾನ್‌ ವಿವಿಧ ವಲಯಗಳಲ್ಲಿ ಸಣ್ಣ ಪ್ರಮಾಣದ ಉದ್ಯೋಗ ಕಡಿತವನ್ನು ಮಾಡುತ್ತಲೇ ಬಂದಿತ್ತು. ಈ ನಡುವೆ ಕಳೆದ ಜೂನ್‌ನಲ್ಲಿ ಕಂಪನಿ ಸಿಇಒ ಎಐ ಬಳಕೆ ಕಾರಣಕ್ಕೆ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿರುವುದಾಗಿ ಹೇಳಿದ್ದರು. 2022ರಲ್ಲಿ ಕೋವಿಡ್‌ ಸಂದರ್ಭದಲ್ಲಿ 27 ಸಾವಿರ ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿತ್ತು.