ಅಂಬಾನಿ ಕುಟುಂಬ ಆಸ್ತಿ ₹28 ಲಕ್ಷ ಕೋಟಿ

| Published : Aug 13 2025, 12:30 AM IST

ಸಾರಾಂಶ

ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪರಿವಾರದ ಆಸ್ತಿಯು 28 ಲಕ್ಷ ಕೋಟಿ ರು. ತಲುಪಿದ್ದು, ಇದು ಅದಾನಿ ಪರಿವಾರದ ಸಂಪತ್ತಿನ ಎರಡು ಪಟ್ಟಿನಷ್ಟಾಗಿದೆ. ಪ್ರಸ್ತುತ ಅದಾನಿ ಆಸ್ತಿ 14.01 ಲಕ್ಷ ಕೋಟಿ ರು. ಇದೆ ಎಂದು ಹುರುನ್‌ ಸಂಸ್ಥೆಯ ವರದಿ ಹೇಳಿದೆ.

- ಅದಾನಿ ಕುಟುಂಬಕ್ಕಿಂತ ದುಪ್ಪಟ್ಟು ಆಸ್ತಿಕುಟುಂಬಆಸ್ತಿಅಂಬಾನಿ28 ಲಕ್ಷ ಕೋಟಿ ರು.ಅದಾನಿ14 ಲಕ್ಷ ಕೋಟಿ ರು.ಬಿರ್ಲಾ6.47 ಲಕ್ಷ ಕೋಟಿ ರು.ಜಿಂದಾಲ್‌5.70 ಲಕ್ಷ ಕೋಟಿ ರು.

ಬಜಾಜ್‌5.64 ಲಕ್ಷ ಕೋಟಿ ರು.

ಪಿಟಿಐ ಮುಂಬೈ

ದೇಶದ ಅತ್ಯಂತ ಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪರಿವಾರದ ಆಸ್ತಿಯು 28 ಲಕ್ಷ ಕೋಟಿ ರು. ತಲುಪಿದ್ದು, ಇದು ಅದಾನಿ ಪರಿವಾರದ ಸಂಪತ್ತಿನ ಎರಡು ಪಟ್ಟಿನಷ್ಟಾಗಿದೆ. ಪ್ರಸ್ತುತ ಅದಾನಿ ಆಸ್ತಿ 14.01 ಲಕ್ಷ ಕೋಟಿ ರು. ಇದೆ ಎಂದು ಹುರುನ್‌ ಸಂಸ್ಥೆಯ ವರದಿ ಹೇಳಿದೆ. ಭಾರತದ 300 ಶ್ರೀಮಂತ ಪರಿವಾರಗಳು 140 ಲಕ್ಷ ಕೋಟಿ ರು.ಗೂ ಅಧಿಕ ಆಸ್ತಿಯನ್ನು ಹೊಂದಿದ್ದು, ಇದು ದೇಶದ ಜಿಡಿಪಿಗಿಂತ ಶೇ.40ರಷ್ಟು ಹೆಚ್ಚಿದೆ. ಅಂಬಾನಿ ಪರಿವಾರದ ಸಂಪತ್ತೇ ಜಿಡಿಪಿಯ ಶೇ.12ರಷ್ಟಾಗುತ್ತದೆ. ಕಳೆದೊಂದು ವರ್ಷದಲ್ಲಿ ಅಂಬಾನಿ ಪರಿವಾರದ ಆಸ್ತಿಯಲ್ಲಿ ಶೇ.10ರಷ್ಟು ಏರಿಕೆ ಆಗಿದ್ದರೆ, ಕುಮಾರ್‌ ಮಂಗಳಂ ಬಿರ್ಲಾ ಪರಿವಾರದ ಸಂಪತ್ತು ಶೇ.20ರಷ್ಟು ಹೆಚ್ಚಿ, 6.47 ಲಕ್ಷ ಕೋಟಿ ರು.ಗೆ ತಲುಪಿದೆ. ಜಿಂದಾಲ್‌ ಪರಿವಾರದ ಆಸ್ತಿ ಶೇ.21ರ ಏರಿಕೆಯೊಂದಿಗೆ 5.70 ಲಕ್ಷ ಕೋಟಿ ರು. ಆಗಿದೆ. ಅತ್ತ ಇದೇ ಅವಧಿಯಲ್ಲಿ ಬಜಾಜ್‌ ಪರಿವಾರದ ಆಸ್ತಿಯಲ್ಲಿ ಶೇ.21ರಷ್ಟು ಕುಸಿತವಾಗಿದ್ದು, ಒಟ್ಟು ಆಸ್ತಿ 5.64 ಲಕ್ಷ ಕೋಟಿ ರು. ಆಗಿದೆ.