ಸೌದಿ ಅರೇಬಿಯಾದ ಫ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ಶುಕ್ರವಾರ ಇರಾನ್‌ ನಡೆಸಿದ ದಾಳಿಯಲ್ಲಿ ಹಾನಿಗೀಡಾದ ಅಮೆರಿಕ ವಿಮಾನಗಳ ಚಿತ್ರಗಳು ಬಹಿರಂಗವಾಗಿವೆ.

ವಾಷಿಂಗ್ಟನ್‌: ಸೌದಿ ಅರೇಬಿಯಾದ ಫ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ಶುಕ್ರವಾರ ಇರಾನ್‌ ನಡೆಸಿದ ದಾಳಿಯಲ್ಲಿ ಹಾನಿಗೀಡಾದ ಅಮೆರಿಕ ವಿಮಾನಗಳ ಚಿತ್ರಗಳು ಬಹಿರಂಗವಾಗಿವೆ.

ಈ ಏರ್‌ಬೇಸ್‌ನಲ್ಲಿ ಇ-3 ಎಡಬ್ಲುಎಸಿಎಸ್‌ ಯುದ್ಧ ವಿಮಾನಗಳು ನೆಲೆಗೊಂಡಿದ್ದವು ಹಾಗೂ ಹಲವು ಅಮೆರಿಕದ ಯೋಧರು ಇದ್ದರು. ದಾಳಿಯ ವೇಳೆ ವಿಮಾನಗಳು ಹಾನಿಗೀಡಾಗಿವೆ ಎಂದು ಶನಿವಾರವೇ ಇರಾನ್‌ ಹೇಳಿತ್ತು. ಭಾನುವಾರ ಇರಾನ್‌ನ ಪ್ರೆಸ್‌ ಟೀವಿ, ಈ ವಿಮಾನಗಳ ಚಿತ್ರ ಬಿಡುಗಡೆ ಮಾಡಿದೆ. ವಿಮಾನಗಳು ದಾಳಿಗೆ ಹೊತ್ತಿ ಉರಿದು 2 ತುಂಡಾಗಿದ್ದು ಕಂಡುಬರುತ್ತದೆ.

ಈ ದಾಳಿಯಲ್ಲಿ ಅಮೆರಿಕದ ಹತ್ತು ಯೋಧರು ಗಾಯಗೊಂಡಿದ್ದಾರೆ ಎಂದು ಶನಿವಾರವೇ ಇರಾನ್‌ ಹೇಳಿತ್ತು.

ಪ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಮಾ.1ರಂದು ಇದೇ ರೀತಿ ನಡೆದ ದಾಳಿಯಲ್ಲಿ ಸೇನಾ ಸಿಬ್ಬಂದಿಯೊಬ್ಬರು ಆ ಸಂದರ್ಭದಲ್ಲಿ ಮೃತಪಟ್ಟಿದ್ದರು.