ಮನಮೋಹನ್‌ ಸಿಂಗ್‌ ಸ್ಮಾರಕ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ಟೀಕೆಗೆ, ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ರಾಷ್ಟ್ರಪತಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಿರುಗೇಟು ನೀಡಿದ್ದಾರೆ.

ನವದೆಹಲಿ: ಮನಮೋಹನ್‌ ಸಿಂಗ್‌ ಸ್ಮಾರಕ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ಟೀಕೆಗೆ, ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ರಾಷ್ಟ್ರಪತಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಿರುಗೇಟು ನೀಡಿದ್ದಾರೆ. 

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಶರ್ಮಿಷ್ಟಾ, ‘2020ರಲ್ಲಿ ನಮ್ಮ ತಂದೆ ಮೃತಪಟ್ಟಾಗ ಕಾಂಗ್ರೆಸ್‌ ಒಂದು ಸಿಡಬ್ಲ್ಯುಸಿ ಸಭೆ ಕರೆದು ಶ್ರದ್ಧಾಂಜಲಿ ಸಹ ಅರ್ಪಿಸಲಿಲ್ಲ. ಅದನ್ನು ಕೇಳಿದಾಗ ಓರ್ವ ಕಾಂಗ್ರೆಸ್‌ ನಾಯಕರು ‘ಶ್ರದ್ಧಾಂಜಲಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸುವುದಿಲ್ಲ’ ಎಂಬ ಉದ್ಧಟ ಹೇಳಿಕೆ ನೀಡಿದ್ದರು.

 ಬಳಿಕ ನಮ್ಮ ತಂದೆ ಬರೆದ ಡೈರಿ ಓದಿದಾಗ ಮಾಜಿ ರಾಷ್ಟ್ರಪತಿ ಆರ್‌.ಕೆ.ನಾರಾಯಣ್‌ ಅವರು ಮೃತಪಟ್ಟಾಗ ನಮ್ಮ ತಂದೆಯೇ ಸಿಡಬ್ಲ್ಯುಸಿ ಸಭೆ ಕರೆದು ಶ್ರದ್ಧಾಂಜಲಿ ನಡೆಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.