ಕೇಂದ್ರ ಸರ್ಕಾರ ಆರಂಭಿಸಿರುವ ದೇಶದ ಮೊದಲ ಡ್ರಗ್ಸ್‌ ಸಹಾಯವಾಣಿ ‘1933’ಗೆ ಕೇಂದ್ರ ಸಚಿವ ಅಮಿತ್‌ ಶಾ ಚಾಲನೆ

| Published : Jul 19 2024, 12:55 AM IST / Updated: Jul 19 2024, 05:14 AM IST

Amith Shah
ಕೇಂದ್ರ ಸರ್ಕಾರ ಆರಂಭಿಸಿರುವ ದೇಶದ ಮೊದಲ ಡ್ರಗ್ಸ್‌ ಸಹಾಯವಾಣಿ ‘1933’ಗೆ ಕೇಂದ್ರ ಸಚಿವ ಅಮಿತ್‌ ಶಾ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆಂದೇ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರತ್ಯೇಕ ಸಹಾಯವಾಣಿ ‘1933’ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಚಾಲನೆ ನೀಡಿದರು.ಈ ಸಹಾಯವಾಣಿ ಸಂಖ್ಯೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ನವದೆಹಲಿ: ದೇಶದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆಂದೇ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರತ್ಯೇಕ ಸಹಾಯವಾಣಿ ‘1933’ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಚಾಲನೆ ನೀಡಿದರು.ಈ ಸಹಾಯವಾಣಿ ಸಂಖ್ಯೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. 

ಯಾವುದೇ ವ್ಯಕ್ತಿಯು ಮಾದಕ ವಸ್ತುಗಳಿಗೆ ಸಂಬಂಧಿಸಿದ ದೂರು, ಸಲಹೆ ಹಾಗೂ ಮಾಹಿತಿಗಳನ್ನು ಇದರಲ್ಲಿ ಹಂಚಿಕೊಳ್ಳಬಹುದಾಗಿದೆ. ಅಲ್ಲದೇ ಇದಕ್ಕೆ ಕರೆ ಮಾಡಿದವರ ಮಾಹಿತಿಯನ್ನು ಗುಪ್ತವಾಗಿ ಇಡಲಾಗುತ್ತದೆ.

ಇದರೊಂದಿಗೆ info.ncbmanas@gov.in ಇ-ಮೇಲ್‌ ವಿಳಾಸ ಹಾಗೂ ncbmanas.gov.in ವೆಬ್‌ಸೈಟ್‌ಗಳನ್ನು ಉದ್ಘಾಟಿಸಿದರು. ಸಾರ್ವಜನಿಕರು ಇದರಲ್ಲಿ ಯಾವುದಕ್ಕಾದರೂ ಮಾದಕ ವಸ್ತು ಮಾರಾಟ, ಖರೀದಿ, ಸರಬರಾಜು ಇತ್ಯಾದಿ ದೂರುಗಳನ್ನು ಕಳುಹಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.