ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ : ರೈಲಿಗೆ ಸಿಲುಕುವುದರಿಂದ ಪಾರಾದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು!

| Published : Sep 07 2024, 01:30 AM IST / Updated: Sep 07 2024, 04:39 AM IST

ಸಾರಾಂಶ

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಬಚಾವ್‌ ಆಗಿದ್ದಾರೆ. ಘಟನೆ ಮಧುರಾನಗರದ ರೈಲ್ವೆ ಸೇತುವೆ ಮೇಲೆ ನಡೆದಿದ್ದು, ಭದ್ರತಾ ಸಿಬ್ಬಂದಿ ಸಿಎಂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ವಿಜಯವಾಡ: ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವಾಗ ರೈಲಿಗೆ ಸಿಲುಕುವುದರಿಂದ ಬಚಾವ್‌ ಆಗಿದ್ದಾರೆ. ಮಧುರಾನಗರದ ರೈಲ್ವೆ ಸೇತುವೆ ಮೇಲೆ ಈ ಘಟನೆ ನಡೆದಿದೆ.

ಪ್ರವಾಹ ಪರಿಸ್ಥಿತಿ ಬಗ್ಗೆ ಸಿಎಂ ರೈಲ್ವೆ ಸೇತುವೆ ಮೇಲೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ನಾಯ್ಡು ಹಳಿ ಮಧ್ಯದಲ್ಲೇ ನಡೆದು ಹೋಗುತ್ತಿದ್ದಾಗ, ಅದೇ ಹಳಿಯಲ್ಲಿ ಇದ್ದಕ್ಕಿದ್ದಂತೆ ರೈಲು ಬಂದಿದೆ. ತ್ವರಿತವಾಗಿ ಯೋಚಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ನಾಯ್ಡು ಅವರನ್ನು ಹಳಿಯ ಪಕ್ಕದ ಪಾದಚಾರಿ ಮಾರ್ಗಕ್ಕೆ ಕರೆತಂದರು. ಕೆಲವೇ ಇಂಚಿನಲ್ಲಿ ನಾಯ್ಡು ಪಾರಾದರು.

ನಾಯ್ಡು ಕಳೆದ 5 ದಿನಗಳಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ, ಆಗಾಗ್ಗೆ ಭದ್ರತಾ ಪ್ರೋಟೋಕಾಲ್‌ಗಳನ್ನು ನಿರ್ಲಕ್ಷಿಸಿದ್ದಾರೆ. ಅವರು ಮೊಣಕಾಲು ಆಳದ ನೀರಿನಲ್ಲಿ ನಡೆದುಕೊಂಡು ಎನ್‌ಡಿಅರ್‌ಎಫ್‌ ಬೋಟ್‌ಗಳಿಗೆ ಜಿಗಿದ ಪ್ರಸಂಗಗಳೂ ನಡೆದಿವೆ.