ಸಾರಾಂಶ
ಕರ್ನಾಟಕದ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದ ಮಹತ್ವಾಕಾಂಕ್ಷೆಯ 9,719 ಎಕ್ರೆ ಪ್ರದೇಶ ವ್ಯಾಪ್ತಿಯ ಓರ್ವಾಕಲ್ ನೋಡ್ ಕೈಗಾರಿಕಾ ಪ್ರದೇಶದ ಮಾಸ್ಟರ್ ಪ್ಲಾನ್‌ಗೆ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.
ಅಮರಾವತಿ: ಕರ್ನಾಟಕದ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದ ಮಹತ್ವಾಕಾಂಕ್ಷೆಯ 9,719 ಎಕ್ರೆ ಪ್ರದೇಶ ವ್ಯಾಪ್ತಿಯ ಓರ್ವಾಕಲ್ ನೋಡ್ ಕೈಗಾರಿಕಾ ಪ್ರದೇಶದ ಮಾಸ್ಟರ್ ಪ್ಲಾನ್‌ಗೆ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.
ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್(ಎಚ್‌ಬಿಐಸಿ)ನ ಭಾಗವಾಗಿ ನಿರ್ಮಿಸುತ್ತಿರುವ ಈ ಕೈಗಾರಿಕಾ ಕ್ಷೇತ್ರ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಕರ್ನಾಟಕದ ಬೆಂಗಳೂರು, ತಮಿಳುನಾಡು, ತೆಲಂಗಾಣದ ಕೈಗಾರಿಕೆಗಳನ್ನು ಇದು ಸೆಳೆಯುವ ಸಾಧ್ಯತೆ ಇದೆ.
ಆಂಧ್ರಪ್ರದೇಶ ಕೈಗಾರಿಕಾ ಕಾರಿಡಾರ್ ಪ್ರಾಧಿಕಾರವು ಭೂಬಳಕೆ ಉದ್ದೇಶದ ಮಾಸ್ಟರ್ ಪ್ಲಾನ್‌ಗೆ ಒಪ್ಪಿಗೆ ನೀಡಿದ್ದು, ಅದರಂತೆ ಈ ಪ್ರದೇಶದ ಶೇ.52ರಷ್ಟು ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ರಾಜ್ಯ ಸರ್ಕಾರದ ಕಾರ್ಯದರ್ಶಿ ಎನ್.ಯುವರಾಜ್ ತಿಳಿಸಿದ್ದಾರೆ.
ಯೋಜನೆಯ ಮೊದಲ ಹಂತದಲ್ಲಿ 1424 ಎಕ್ರೆ, ಎರಡನೇ ಹಂತದಲ್ಲಿ 3594 ಎಕ್ರೆ, ಮೂರನೇ ಹಂತದಲ್ಲಿ 5017 ಎಕ್ರೆ ಭೂಮಿ ಬಳಸಲಾಗುತ್ತದೆ. ಬಾಕಿ ಉಳಿದ ಭೂಮಿಯನ್ನು ಸಾರಿಗೆ, ಮನೆ, ವಾಣಿಜ್ಯ, ಸಾರ್ವಜನಿಕ ಮತ್ತು ಬ್ಯಾಂಕ್‌ನಂಥ ಮೂಲಸೌಲಭ್ಯಗಳ ಉದ್ದೇಶಕ್ಕೆ ಬಳಸಲಾಗುವುದು.
ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯು ದಕ್ಷಿಣ ಭಾರತವನ್ನು ಮಧ್ಯ ಭಾರತದೊಂದಿಗೆ ಜೋಡಿಸುವ ಗುರಿ ಹೊಂದಿದೆ. ಆಂಧ್ರದಲ್ಲಿ ಚಂದ್ರಬಾಬು ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.
- ಹೈದ್ರಾಬಾದ್- ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಅಂತಿಮ ಮಾಸ್ಟರ್ ಪ್ಲ್ಯಾನ್ ಬಿಡುಗಡೆ
- ಕರ್ನಾಟಕದ ಬಳ್ಳಾರಿಗೆ ಹೊಂದಿಕೊಂಡಿರುವ ಕರ್ನೂಲ್ ಜಿಲ್ಲೆಯಲ್ಲಿ 9713 ಎಕರೆಯಲ್ಲಿ ಅಭಿವೃದ್ಧಿ