ಪಿವಿಸಿ ಪೈಪ್‌ ಸಾಗಿಸುತ್ತಿದ್ದ ಲಾರಿಯೊಳಗೆ ಸಾಗಿಸುತ್ತಿದ್ದ 8.3 ಕೋಟಿ ರು. ನಗದನ್ನು ಆಂಧ್ರಪ್ರದೇಶ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗರಿಕಪಾಡು (ಆಂಧ್ರಪ್ರದೇಶ): ಪಿವಿಸಿ ಪೈಪ್‌ ಸಾಗಿಸುತ್ತಿದ್ದ ಲಾರಿಯೊಳಗೆ ಸಾಗಿಸುತ್ತಿದ್ದ 8.3 ಕೋಟಿ ರು. ನಗದನ್ನು ಆಂಧ್ರಪ್ರದೇಶ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಅಲ್ಲದೆ ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗುಂಟೂರಿನಿಂದ ತೆಲಂಗಾಣದ ಹೈದರಾಬಾದ್‌ಗೆ ಹೋಗುತ್ತಿದ್ದ ಪಿವಿಸಿ ಪೈಪ್‌ ತುಂಬಿದ ಲಾರಿಯನ್ನು ಆಂಧ್ರ-ತೆಲಂಗಾಣ ಗರಿಕಪಾಡು ಅಂತಾರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಪರಿಶೀಲಿಸಿದಾಗ ಲಾರಿ ಕ್ಯಾಬಿನ್‌ನಲ್ಲಿ 8.3 ಕೋಟಿ ನಗದು ಪತ್ತೆಯಾಗಿದೆ. 

ಈ ಸಂಬಂಧ ಲಾರಿ ಚಾಲಕನನ್ನು ಹಾಗೂ ಕ್ಲೀನರ್‌ನನ್ನು ವಶಕ್ಕೆ ಪಡೆದು ಇಬ್ಬರ ಮೇಲೂ ದೂರು ದಾಖಲಿಸಿದ್ದಾರೆ. 2024ರ ಚುನಾವಣೆ ಸಂದರ್ಭದಲ್ಲಿ ಸಿಕ್ಕ ಭಾರಿ ಮೊತ್ತದ ನಗದು ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.