ಸಾರಾಂಶ
ವಿಭಜಿತ ಆಂಧ್ರಪ್ರದೇಶ ಸರ್ಕಾರ ಜಾತಿ ಗಣತಿಯನ್ನು ಪ್ರಾರಂಭಿಸಿದ್ದು, 15 ದಿನದೊಳಗೆ ಸಮಗ್ರ ಮಾಹಿತಿ ಕಲೆ ಹಾಕಲು ಯೋಜನೆ ರೂಪಿಸಲಾಗಿದೆ.
ಅಮರಾವತಿ: ರಾಜ್ಯದ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಸಮಗ್ರ ಜಾತಿ ಗಣತಿಯನ್ನು ಆಂಧ್ರ ಪ್ರದೇಶ ಸರ್ಕಾರ ಶುಕ್ರವಾರ ಪ್ರಾರಂಭಿಸಿದೆ. ಕರ್ನಾಟಕ, ಬಿಹಾರದ ನಂತರ ಜಾತಿ ಗಣತಿಯನ್ನು ನಡೆಸುತ್ತಿರುವ ದೇಶದ 3ನೇ ರಾಜ್ಯ ಆಂಧ್ರ ಪ್ರದೇಶ ಆಗಿದೆ.
ಈ ಬಗ್ಗೆ ಮಾತನಾಡಿದ ಆಂಧ್ರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಶ್ರೀನಿವಾಸ ವೇಣುಗೋಪಾಲ ಕೃಷ್ಣ, ‘ಸಮಗ್ರ ಜಾತಿ ಗಣತಿಯನ್ನು ಮೊದಲ ಹಂತದಲ್ಲಿ 10 ದಿನ ನಡೆಸಲಾಗುವುದು. ಅಗತ್ಯ ಎನಿಸಿದರೆ ಇನ್ನೂ ನಾಲ್ಕು ಅಥವಾ ಐದು ದಿನ ನಡೆಸಲಾಗುವುದು’ ಎಂದು ಹೇಳಿದರು. ರಾಜ್ಯದ ಪ್ರತಿ ನಿವಾಸಕ್ಕೂ ಸ್ವಯಂಸೇವಕರು ಭೇಟಿ ನೀಡಿ ಜಾತಿ ಬಗ್ಗೆ ಮಾಹಿತಿ ಕಲೆ ಹಾಕಿ ಗ್ರಾಮದ ಕಾರ್ಯದರ್ಶಿಗೆ ಮಾಹಿತಿ ರವಾನಿಸುತ್ತಾರೆ ಎಂದು ಕೃಷ್ಣ ವಿವರಿಸಿದರು.