ಸಾರಾಂಶ
ಅಮರಾವತಿ: ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹೊತ್ತಲ್ಲಿ ಅಪಘಾತಕ್ಕೀಡಾದ ಸುಣ್ಣದ ಮೂಟೆ ಸಾಗಿಸುವ ಲಘು ವಾಣಿಜ್ಯ ವಾಹನದಲ್ಲಿ 7 ಕೋಟಿ ರು. ಹಣ ಪತ್ತೆಯಾಗಿದೆ.
ಈ ಘಟನೆ ಪೂರ್ವ ಗೋದಾವರಿಯಲ್ಲಿ ನಡೆದಿದ್ದು, ಅಧಿಕಾರಿಗಳು ಹಣವನ್ನು ವಶ ಪಡಿಸಿಕೊಂಡಿದ್ದಾರೆ. ಹಣದ ಮೂಲ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.ಹೈದರಾಬಾದ್‌ನ ನಾಚರಂನಿಂದ ಮಂಡಪೇಟೆಗೆ ತೆರಳುತ್ತಿದ್ದ ಲಘು ವಾಣಿಜ್ಯ ವಾಹನ ನೆಲ್ಲಜೆರ್ಲದ ವೀರವಳ್ಳಿ ಟೋಲ್ ಬಳಿ ಟ್ರಕ್ ಗುದ್ದಿದ ಪರಿಣಾಮ ಅಪಘಾತಕ್ಕೀಡಾಗಿದೆ. ಈ ಸಂದರ್ಭದಲ್ಲಿ ಲಘು ವಾಣಿಜ್ಯ ವಾಹನ ಪಲ್ಟಿಯಾಗಿದ್ದು, ಈ ವೇಳೆ ರಾಸಾಯನಿಕ ಸುಣ್ಣದ ಮೂಟೆಯಡಿ ಬರೋಬ್ಬರಿ 7 ಕೋಟಿ ರು. ಹಣವಿರುವುದು ಪತ್ತೆಯಾಗಿದೆ. ಒಟ್ಟು 7 ಬಾಕ್ಸ್‌ಗಳಲ್ಲಿ ತಲಾ 1. ಕೋಟಿ ರು ಹಣ ಇಡಲಾಗಿತ್ತು. ಬಾಕ್ಸ್ ಮೂಟೆ ಅಡಿ ಅಪ್ಪಚ್ಚಿ ಆಗಿವೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿಸಿದ್ದಾರೆ. ಎಲೆಕ್ಷನ್ ಹೊತ್ತಲ್ಲಿ ಭಾರೀ ಪ್ರಮಾಣದ ಹಣ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.