ಸಾರಾಂಶ
ದಿಲ್ಲಿ ಜಾಮಿಯಾ ಮಿಲಿಯಾ ವಿವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕಾಯ್ದೆ ವಾಪಸಾತಿಗೆ ಆಗ್ರಹಿಸಿದರು. ಸಿಎಎ ಜಾರಿ ಹಿನ್ನೆಲೆಯಲ್ಲಿ ದಿಲ್ಲಿಯ ಆಯಕಟ್ಟಿನ ಜಾಗಗಳಲ್ಲಿ ಭಾರಿ ಭದ್ರತೆ ಹಮ್ಮಿಕೊಳ್ಳಲಾಗಿದೆ.
ಗುವಾಹಟಿ/ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ವಿರುದ್ಧ ಅಸ್ಸಾಂ ರಾಜ್ಯಾದ್ಯಂತ ಹಾಗೂ ದಿಲ್ಲಿಯ ಕೆಲವಡೆ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ಮತ್ತು ಕಾನೂನಿನ ಪ್ರತಿಗಳನ್ನು ಸುಟ್ಟುಹಾಕಲಾಗಿದೆ.
ದಿಲ್ಲಿ ಜಾಮಿಯಾ ಮಿಲಿಯಾ ವಿವಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕಾಯ್ದೆ ವಾಪಸಾತಿಗೆ ಆಗ್ರಹಿಸಿದರು. ಸಿಎಎ ಜಾರಿ ಹಿನ್ನೆಲೆಯಲ್ಲಿ ದಿಲ್ಲಿಯ ಆಯಕಟ್ಟಿನ ಜಾಗಗಳಲ್ಲಿ ಭಾರಿ ಭದ್ರತೆ ಹಮ್ಮಿಕೊಳ್ಳಲಾಗಿದೆ.ಅಸ್ಸಾಂನಲ್ಲಿ ಆಕ್ರೋಶ:
ಅಸ್ಸಾಂನ ಗುವಾಹಟಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಾಯ್ದೆಯ ಪ್ರತಿಗಳನ್ನು ಸುಟ್ಟುಹಾಕಿದರು.ಲಖಿಂಪುರದಲ್ಲಿ ಅಸೋಮ್ ಜಾತ್ಯತಾಬಾದಿ ಯುಬ ಛತ್ರ ಪರಿಷತ್ (ಎಜೆವೈಸಿಪಿ) ಪ್ರಧಾನ ಮಂತ್ರಿ, ಗೃಹ ಸಚಿವರ ಪ್ರತಿಕೃತ ಸುಟ್ಟರು,
ಶಿವಸಾಗರ ಜಿಲ್ಲೆಯಲ್ಲಿ ರೈಜೋರ್ ದಳ, ಕೃಷಿ ಮುಕ್ತಿ ಸಂಗ್ರಾಮ ಸಮಿತಿ ಮತ್ತು ಛತ್ರ ಮುಕ್ತಿ ಪರಿಷತ್ ಕಾರ್ಯಕರ್ತರು, ಸಂಯುಕ್ತ ವಿರೋಧ ವೇದಿಕೆ ಅಸ್ಸಾಂ (ಯುಒಎಫ್‌ಎ) ಮತ್ತು ಶಾಸಕ ಅಖಿಲ್ ಗೊಗೊಯ್ ವಿವಾದಿತ ಕಾನೂನನ್ನು ವಿರೋಧಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಶಿವಸಾಗರ್, ಗೋಲಾಘಾಟ್, ನಾಗಾಂವ್ ಮತ್ತು ಕಾಮ್ರೂಪ್‌ನಂತಹ ಕೆಲವು ಜಿಲ್ಲೆಗಳಲ್ಲಿ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಸಿಪಿಎಂ ಈ ಕಾಯ್ದೆಯ ಅನುಷ್ಠಾನದ ವಿರುದ್ಧ ಪ್ರದರ್ಶನವನ್ನು ನಡೆಸಿತು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.