ಸಾರಾಂಶ
ನವದೆಹಲಿ: ಗಾಳಿಯ ವೇಗ ಮತ್ತು ದಿಕ್ಕಿನಿಂದಾಗಿ ಒಂದೇ ರಾತ್ರಿಯಲ್ಲಿ ದೆಹಲಿಯ ಮಾಲಿನ್ಯದ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ ವಾಯುವಿನ ಗುಣಮಟ್ಟ ಇನ್ನೂ ಸಹ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ.
ಅತಿ ಗಂಭೀರದಿಂದ ಕಳಪೆ ಸ್ಥಿತಿಗೆ ಇಳಿದ ವಾಯುಮಾಲಿನ್ಯ
ವೇಗವಾದ ಮಾರುತದಿಂದಾಗಿ ಒಂದೇ ರಾತ್ರಿಯಲ್ಲಿ ಸುಧಾರಣೆನವದೆಹಲಿ: ಗಾಳಿಯ ವೇಗ ಮತ್ತು ದಿಕ್ಕಿನಿಂದಾಗಿ ಒಂದೇ ರಾತ್ರಿಯಲ್ಲಿ ದೆಹಲಿಯ ಮಾಲಿನ್ಯದ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ ವಾಯುವಿನ ಗುಣಮಟ್ಟ ಇನ್ನೂ ಸಹ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ.ರಾಷ್ಟ್ರರಾಜಧಾನಿ ವಲಯದಲ್ಲಿ ಶುಕ್ರವಾರ 405 ಅಂಕಗಳಷ್ಟಿದ್ದ ವಾಯುವಿನ ಗುಣಮಟ್ಟ ಶನಿವಾರ 339 ಅಂಕಗಳಿಗೆ ಇಳಿಕೆ ಕಂಡಿದೆ. ಇದು ಗುರುವಾರ 419, ಬುಧವಾರ 401ರಷ್ಟಿತ್ತು. ಕಳೆದ ವಾರಾಂತ್ಯದಲ್ಲೂ ಸಹ ಮಳೆಯಾದ ಕಾರಣ ವಾಯುವಿನ ಗುಣಮಟ್ಟ ಸುಧಾರಣೆ ಕಂಡಿತ್ತು. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚುವಿಕೆ ಹೆಚ್ಚಾದ ಕಾರಣ ಮತ್ತೊಮ್ಮೆ ಮಾಲಿನ್ಯ ಪ್ರಮಾಣ ಅಧಿಕವಾಗಿತ್ತು. ಶನಿವಾರ ಗಾಜಿಯಾಬಾದ್‌ನಲ್ಲಿ 274, ಗುರುಗ್ರಾಮದಲ್ಲಿ 346, ಗ್ರೇಟರ್ ನೋಯ್ಡಾದಲ್ಲಿ 258, ನೋಯ್ಡಾದಲ್ಲಿ 285 ಮತ್ತು ಫರೀದಾಬಾದ್‌ನಲ್ಲಿ 328 ಅಂಕಗಳಷ್ಟು ವಾಯುವಿನ ಗುಣಮಟ್ಟ ದಾಖಲಾಗಿದೆ. ಸ್ವಿಜರ್ಲೆಂಡ್ ಮೂಲದ ಐಕ್ಯು ಏರ್ ಸಂಸ್ಥೆಯ ಪ್ರಕಾರ ದೆಹಲಿ ವಿಶ್ವದ 2ನೇ ಅತಿ ಮಾಲಿನ್ಯ ನಗರವಾಗಿದೆ. ಇರಾಕ್‌ನ ರಾಜಧಾನಿ ಬಾಗ್ದಾದ್ ಮೊದಲ ಸ್ಥಾನದಲ್ಲಿದೆ.