ರಾಮಮಂದಿರಕ್ಕೆ 60 ಲಕ್ಷ ಭಕ್ತರ ಭೇಟಿ, ರಾಮನಿಗೆ ₹25 ಕೋಟಿ ದೇಣಿಗೆ!
Author : KannadaprabhaNewsNetwork
| Updated : Feb 25 2024, 10:53 AM IST
ರಾಮಮಂದಿರ | Kannada Prabha
Image Credit: KP
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಒಂದು ತಿಂಗಳಲ್ಲಿ ಸುಮಾರು 60 ಲಕ್ಷ ಜನರು ದೇಗುಲಕ್ಕೆ ಭೇಟಿ ನೀಡಿದ್ದು, 25 ಕೋಟಿ ರು.ಗೂ ಅಧಿಕ ನಗದು ಮತ್ತು ಭಾರೀ ಪ್ರಮಾಣದ ಚಿನ್ನಾಭರಣಗಳ ದೇಣಿಗೆ ಹರಿದು ಬಂದಿದೆ.
ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಾದ ತಿಂಗಳಿನಲ್ಲಿ ಬರೋಬ್ಬರಿ 25 ಕೋಟಿ ರು. ಕಾಣಿಕೆ ಬಂದಿದೆ ಎಂದು ರಾಮ ಮಂದಿರ ಟ್ರಸ್ಟ್ ತಿಳಿಸಿದೆ.
ಈವರೆಗೂ 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ.ಜ.23ರಿಂದ ಆರಂಭವಾದ ಸಾರ್ವಜನಿಕ ದರ್ಶನದಲ್ಲಿ ಒಟ್ಟು 25 ಕೇಜಿ ಚಿನ್ನ, ಬೆಳ್ಳಿ ಆಭರಣ, ಹುಂಡಿ ಕಾಣಿಕೆ, ಚೆಕ್, ಡಿಡಿಗಳು ಸೇರಿದೆ.
ಇದು ಆನ್ಲೈನ್ ಕಾಣಿಕೆಯನ್ನು ಹೊರತುಪಡಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ.ಜೊತೆಗೆ ಜ.23ರಿಂದ ಇಲ್ಲಿವರೆಗೂ 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ರಾಮ ನವಮಿ ವೇಳೆ ಭಕ್ತರ ಸಂಖ್ಯೆ 50 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.