ಹಲ್ದ್ವಾನಿ ಹಿಂಸೆ ಕೇಸಿನ ರೂವಾರಿ ಅಬ್ದುಲ್‌ ಮಲಿಕ್‌ ದೆಹಲಿಯಲ್ಲಿ ಬಂಧನ

| Published : Feb 25 2024, 01:47 AM IST

ಹಲ್ದ್ವಾನಿ ಹಿಂಸೆ ಕೇಸಿನ ರೂವಾರಿ ಅಬ್ದುಲ್‌ ಮಲಿಕ್‌ ದೆಹಲಿಯಲ್ಲಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಹಲ್ದ್ವಾನಿ ಗಲಭೆಯ ಪ್ರಮುಖ ರೂವಾರಿ ಎನ್ನಲಾಗಿರುವ ಅಬ್ದುಲ್‌ ಮಲಿಕ್‌ರನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ: ಉತ್ತರಾಖಂಡದಲ್ಲಿ ಅಕ್ರಮ ಮದರಸಾ ಧ್ವಂಸದಿಂದಾಗಿ ತಲೆಎತ್ತಿದ್ದ ಹಲ್ದ್ವಾನಿ ಹಿಂಸಾಚಾರದ ಮಾಸ್ಟರ್‌ಮೈಂಡ್‌ ಅಬ್ದುಲ್‌ ಮಲಿಕ್‌ ಕೊನೆಗೂ ದೆಹಲಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಫೆ.8ರಿಂದ ಆರಂಭವಾದ ಘರ್ಷಣೆಯಲ್ಲಿ ಮಲಿಕ್‌ ಪ್ರಮುಖ ತಂತ್ರ ಹಾಗೂ ಕ್ರಿಮಿನಲ್‌ ಸಂಚು ರೂಪಿಸಿದ್ದ. ಈತ ಹಲವು ದಿನಗಳಿಂದ ಕಣ್ಮರೆಯಾಗಿದ್ದ.

ಪೊಲೀಸರು ಲುಕ್‌ಔಟ್‌ ನೋಟಿಸ್‌ ನೀಡಿದ್ದರು. ಇದರೊಂದಿಗೆ ಈತನ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿದ್ದರು. ಶನಿವಾರ ದೆಹಲಿಯಲ್ಲಿ ಮಲಿಕ್‌ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಫೆ.8ರಿಂದ ನಡೆಯುತ್ತಿರುವ ಘರ್ಷಣೆಯಲ್ಲಿ ಈವರೆಗೂ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ.

ಇದರಲ್ಲಿ ಮಲಿಕ್‌ ಪತ್ನಿ ಪುತ್ರನ ವಿರುದ್ಧವೂ ಪ್ರಕರಣ ದಾಖಲಾಗಿದೆ.