ಸಾರಾಂಶ
ನವದೆಹಲಿ: ಭಾರತ ಸೇನೆಯ ಮೊದಲ ಮಹಿಳಾ ಸುಬೇದಾರ್ ಎಂಬ ಖ್ಯಾತಿಗೆ2022ರ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಟ್ರಾಪ್ ಶೂಟರ್, ಹವಿಲ್ದಾರ್ ಪ್ರೀತಿ ರಜಾಕ್ ಭಾಜನರಾಗಿದ್ದಾರೆ.
‘ಇದು ಭಾರತ ಮತ್ತು ಭಾರತೀಯ ಸೇನೆಗೆ ಹೆಮ್ಮೆಯ ಕ್ಷಣವಾಗಿದೆ. ಟ್ರಾಪ್ ಶೂಟರ್, ಹವಿಲ್ದಾರ್ ಪ್ರೀತಿ ರಜಾಕ್ ಅವರಿಗೆ ಸುಬೇದಾರ್ ಆಗಿ ಭಾನುವಾರ ಪದೋನ್ನತಿ ನೀಡಲಾಗಿದೆ.
ಇದೀಗ ಅವರು ಸೇನೆಯ ಮೊದಲ ಮಹಿಳಾ ಸುಬೇದಾರ್ ಆಗಿದ್ದಾರೆ. ಅವರ ಸಾಧನೆ ನಾರೀಶಕ್ತಿಯ ಅಪೂರ್ವ ಪ್ರದರ್ಶನವಾಗಿದೆ’ ಎಂದು ಸೇನೆ ಹೇಳಿದೆ.
2022ರ ಡಿ.22ರಂದು ಪ್ರೀತಿ ರಜಾಕ್ ಕೋರ್ ಆಫ್ ಮಿಲಿಟರಿ ಪೊಲೀಸ್‌ಗೆ ಸೇರ್ಪಡೆಯಾಗಿದ್ದರು. ಅಲ್ಲದೇ ಶೂಟಿಂಗ್ ವಿಭಾಗದಲ್ಲಿ ಸೇನೆಗೆ ಹವಿಲ್ದಾರ್ ಆಗಿ ಆಯ್ಕೆಯಾದ ಮೊದಲ ಕ್ರೀಡಾಪಟು ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದರು.
2019ರಲ್ಲಿ ಚೀನಾ ಹ್ಯಾಂಗ್‌ಝೋನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಇವರು ಬೆಳ್ಳಿ ಪದಕ ಗಳಿಸಿದ್ದರು.
ಪ್ರೀತಿ ಪ್ರಸ್ತುತ ಆರ್ಮಿ ಮಾರ್ಕ್ಸ್‌ಮನ್ ಶಿಪ್ ಯುನಿಟ್‌ನಲ್ಲಿ ತರಬೇತಿ ಪಡೆಯುತ್ತಿದ್ದು, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.