ಸಾರಾಂಶ
ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ)ವು ಅಸ್ತಮಾ, ಗ್ಲುಕೋಮಾ ಸೇರಿದಂತೆ 8 ಅಗ್ಗದ ದರದ ಔಷಧಿಗಳ ಬೆಲೆಯನ್ನು ಪರಿಷ್ಕರಿಸಿದೆ. ಈ ಔಷಧಿಗಳ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸಿದೆ.
ನವದೆಹಲಿ: ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ)ವು ಅಸ್ತಮಾ, ಗ್ಲುಕೋಮಾ ಸೇರಿದಂತೆ 8 ಅಗ್ಗದ ದರದ ಔಷಧಿಗಳ ಬೆಲೆಯನ್ನು ಪರಿಷ್ಕರಿಸಿದೆ. ಈ ಔಷಧಿಗಳ ಬೆಲೆಯನ್ನು ಶೇ.50ರಷ್ಟು ಹೆಚ್ಚಿಸಿದೆ. ಮಾರುಕಟ್ಟೆಯಲ್ಲಿ ಸದಾ ಕಾಲ ಲಭ್ಯತೆ ಖಚಿತಪಡಿಸುವ ಸಲುವಾಗಿ ಬೆಲೆ ಹೆಚ್ಚಾಳ ಮಾಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಅಸ್ತಮಾ, ಗ್ಲುಕೋಸ್, ಥಲಸ್ಸೇಮಿಯಾ, ಟಿಬಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಔಷಧಿಗಳ ಪೈಕಿ ಹೆಚ್ಚಿನವು ಕಡಿಮೆ ಬೆಲೆ ಹೊಂದಿವೆ. ಆದರೆ ಉತ್ಪಾದನಾ ವೆಚ್ಚದಲ್ಲಿ ಆಗಿರುವ ಏರಿಕೆ ಕಾರಣ ಬೆಲೆ ಏರಿಕೆಗೆ ಕಂಪನಿಗಳು ಮನವಿ ಮಾಡಿದ್ದವು.
ಒಂದು ವೇಳೆ ಬೆಲೆ ಹೆಚ್ಚಳ ಮಾಡದೇ ಇದ್ದಲ್ಲಿ ಕಂಪನಿಗಳು ಇವುಗಳ ಉತ್ಪಾದನೆಯನ್ನೇ ಸ್ಥಗಿತಗೊಳಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಅವುಗಳ ಲಭ್ಯತೆ ಖಚಿತಪಡಿಸಲು ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.