ಸಾರಾಂಶ
ನಕ್ಸಲ್ ಮುಕ್ತ ರಾಜ್ಯದತ್ತ ಸಾಗುತ್ತಿರುವ ಛತ್ತೀಸ್‌ಗಢದಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾವೋವಾದಿ ಉನ್ನತ ಕಮಾಂಡರ್ ಮೊದೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಸೇರಿದಂತೆ 10 ನಕ್ಸಲರು ಹತರಾಗಿದ್ದಾರೆ.
ರಾಯ್ಪುರ: ನಕ್ಸಲ್ ಮುಕ್ತ ರಾಜ್ಯದತ್ತ ಸಾಗುತ್ತಿರುವ ಛತ್ತೀಸ್‌ಗಢದಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾವೋವಾದಿ ಉನ್ನತ ಕಮಾಂಡರ್ ಮೊದೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಸೇರಿದಂತೆ 10 ನಕ್ಸಲರು ಹತರಾಗಿದ್ದಾರೆ. ಇಲ್ಲಿನ ಗರಿಯಾಬಂದ್ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಸಿಬ್ಬಂದಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮಾವೋವಾದಿಗಳು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ 10 ಮಂದಿ ಹತರಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಇನ್ನು ರಾಜ್ಯದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 16 ನಕ್ಸಲರು ಶರಣಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ಗುರುವಾರ ದಂತೇವಾಡದಲ್ಲಿ ನಕ್ಸಲರ ನಡೆಸಿದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ಕೇಂದ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.