ಸಾರಾಂಶ
ಆತಿಶಿ ತಂದೆಯನ್ನೂ ಬದಲಿಸಿಕೊಳ್ಳುವ ಮೂಲಕ ನೈಜ ಚಾರಿತ್ರ್ಯ ಪ್ರದರ್ಶಿಸಿದ್ದಾರೆ’ ಎಂದು ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಕೀಳು ಹೇಳಿಕೆ ನೀಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಆತಿಶಿ ಕಣ್ಣೀರು ಹಾಕಿದ್ದಾರೆ.
ನವದೆಹಲಿ: ‘ಆತಿಶಿ ಉಪನಾಮ ಮೊದಲು ಮಲ್ರೇನಾ ಎಂದಿತ್ತು. ಈಗ ಸಿಂಗ್ ಎಂದು ಬದಲಿಸಿದ್ದಾರೆ. ಆತಿಶಿ ತಂದೆಯನ್ನೂ ಬದಲಿಸಿಕೊಳ್ಳುವ ಮೂಲಕ ನೈಜ ಚಾರಿತ್ರ್ಯ ಪ್ರದರ್ಶಿಸಿದ್ದಾರೆ’ ಎಂದು ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಕೀಳು ಹೇಳಿಕೆ ನೀಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಆತಿಶಿ ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಆತಿಶಿ, ‘ನಮ್ಮ ರಾಜಕಾರಣ ಇಷ್ಟೊಂದು ಕೆಳಗಡೆ ಇಳಿದಿದ್ದು ಹೇಗೆ? 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿಗೆ ಬಿಧೂರಿ ಏನು ಮಾಡಿದ್ದಾರೆ ಎಂಬುದನ್ನು ತೋರಿಸಬೇಕು. ಅವರು ನಮ್ಮ ಕೆಲಸದ ಮೂಲಕ ಮತ ಕೇಳಬೇಕೇ ಹೊರತು ನನ್ನ ತಂದೆಯನ್ನು ನಿಂದಿಸುವುದರ ಮೂಲಕ ಅಲ್ಲ’ ಎಂದು ಅತ್ತರು.
ಈ ಹಿಂದೆ ಸಂಸರದಾದ್ದ ಬಿಧೂರಿ ಕಲ್ಕಾಜಿ ಕ್ಷೇತ್ರದಿಂದ ಆತಿಶಿ ವಿರುದ್ಧ ಕಣಕ್ಕಿಳಿದಿದ್ದು, ಭಾನುವಾರ ಆತಿಶಿ ಅವರ ಉಪನಾಮದ ವಿರುದ್ಧ ಕೀಳು ಹೇಳಿಕೆ ನೀಡಿದ್ದರು.