ಚುನಾವಣೆ ಹಿನ್ನೆಲೆ ಶೀಘ್ರ ನಕಲಿ ಕೇಸಲ್ಲಿ ಆತಿಶಿ ಬಂಧನ : ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಭವಿಷ್ಯ

| Published : Dec 26 2024, 01:04 AM IST / Updated: Dec 26 2024, 04:30 AM IST

ಸಾರಾಂಶ

ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಪ್‌ನ ತಯಾರಿಗೆ ಕಲ್ಲು ಹಾಕಲು ಮುಖ್ಯಮಂತ್ರಿ ಆತಿಶಿಯನ್ನು ಬಂಧಿಸಿ, ಪಕ್ಷದ ಹಿರಿಯ ನಾಯಕರ ಮನೆಗಳ ಮೇಲೆ ರೇಡ್‌ ನಡೆಸಲು ಕೇಂದ್ರೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ.

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಪ್‌ನ ತಯಾರಿಗೆ ಕಲ್ಲು ಹಾಕಲು ಮುಖ್ಯಮಂತ್ರಿ ಆತಿಶಿಯನ್ನು ಬಂಧಿಸಿ, ಪಕ್ಷದ ಹಿರಿಯ ನಾಯಕರ ಮನೆಗಳ ಮೇಲೆ ರೇಡ್‌ ನಡೆಸಲು ಕೇಂದ್ರೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್‌, ‘7 ಸಂಸದರು ಹಾಗೂ ಲೆಫ್ಟಿನೆಂಟ್ ಗವರ್ನರ್‌ ಜತೆಗೂಡಿ ದೆಹಲಿಯಲ್ಲಿ ಅರ್ಧ ಸರ್ಕಾರ ನಡೆಸುತ್ತಿರುವ ಬಿಜೆಪಿ, ಅವರ ಮೂಲಕ ಸರ್ಕಾರದ ಕೆಲಸಗಳಿಗೆ ಅಡಚಣೆ ಉಂಟುಮಾಡುತ್ತಿದೆ. ಅದಕ್ಕೆ ನಾವು ಜಗ್ಗದಿದ್ದಾಗ ಆಪ್‌ನ ಪ್ರಮುಖ ನಾಯಕರನ್ನು ಜೈಲಿಗಟ್ಟಲಾಯಿತು. ಮುಂದಿನ ವರ್ಷ ಚುನಾವಣೆ ಇರುವುದರಿಂದ ಆತಿಶಿಯವರನ್ನೂ ಬಂಧಿಸಲಾಗುವುದು’ ಎಂದರು.