ಖರ್ಗೆ ಆರೋಪ ನಿರಾಧಾರ: ಚು.ಆಯೋಗ

| Published : May 10 2024, 11:48 PM IST / Updated: May 11 2024, 08:33 AM IST

Mallikarjun Kharge

ಸಾರಾಂಶ

2024ರ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತದ ಮತದಾನದ ದತ್ತಾಂಶಗಳು ಸಮರ್ಪಕವಾಗಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ನಾಯಕರಿಗೆ ಬರೆದಿದ್ದ ಪತ್ರಕ್ಕೆ ಚುನಾವಣಾ ಆಯೋಗ ಆಕ್ಷೇಪಿಸಿದ್ದು, ‘ಈ ಆರೋಪ ನಿರಾಧಾರ’ ಎಂದು ಶುಕ್ರವಾರ ಪ್ರತಿಕ್ರಿಯೆ ನೀಡದೆ.

ನವದೆಹಲಿ: ‘2024ರ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತದ ಮತದಾನದ ದತ್ತಾಂಶಗಳು ಸಮರ್ಪಕವಾಗಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ನಾಯಕರಿಗೆ ಬರೆದಿದ್ದ ಪತ್ರಕ್ಕೆ ಚುನಾವಣಾ ಆಯೋಗ ಆಕ್ಷೇಪಿಸಿದ್ದು, ‘ಈ ಆರೋಪ ನಿರಾಧಾರ’ ಎಂದು ಶುಕ್ರವಾರ ಪ್ರತಿಕ್ರಿಯೆ ನೀಡದೆ.

‘ಮತದಾನದ ದತ್ತಾಂಶ ಬಿಡುಗಡೆಯಲ್ಲಿ ವಿಳಂಬವಾಗಿದೆ. ಆದರೆ ಅದರಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಖರ್ಗೆ ಅವರ ಆರೋಪವು ಅನಪೇಕ್ಷಿತ. ಅವರ ಆರೋಪದಲ್ಲಿ ಯಾವುದೇ ವಾಸ್ತವದ ಅಂಶಗಳಿಲ್ಲ. ಮತದಾರರನ್ನು ಮತ್ತು ರಾಜಕೀಯ ಪಕ್ಷಗಳನ್ನು ಗೊಂದಲಕ್ಕೆ ದೂಡಿ ದಾರಿತಪ್ಪಿಸುವ ಒಂದು ಉದ್ದೇಶಪೂರ್ವಕ ಪ್ರಯತ್ನವಾಗಿದೆ’ ಎಂದು ಆಯೋಗ ಕಿಡಿಕಾರಿದೆ.

‘ಚುನಾವಣಾ ಅಯೋಗವು ಪಕ್ಷಾತೀತವಾಗಿ ಕೆಲಸ ಮಾಡುತ್ತಿದೆ. ಅದರ ಬಗ್ಗೆ ನಿಮಗೆ ಸಂಶಯ ಬೇಡ. ಮತದಾನದ ದತ್ತಾಂಶದಲ್ಲಿ ಯಾವುದೇ ಅಂಕಿ ಅಂಶಗಳು ವ್ಯತ್ಯಾಸವಾಗಿಲ್ಲ. ಅನವಶ್ಯಕವಾಗಿ ನಿರಾಧಾರಗಳ ಮೂಲಕ ಅರೋಪ ಮಾಡುವುದು ತಪ್ಪು’ ಎಂದು ಖರ್ಗೆ ಅವರಿಗೆ ತಿಳಿಸಿದೆ.ಚುನಾಚಣಾ ಆಯೋಗವು ಇತ್ತೀಚೆಗೆ ಮೊದಲ ಮತ್ತು ಎರಡನೇ ಹಂತದ ಮತದಾನದ ದತ್ತಾಂಶಗಳನ್ನು ತುಂಬಾ ವಿಳಂಬವಾಗಿ ಬಿಡುಗಡೆ ಮಾಡಿತ್ತು. ಈ ದತ್ತಾಂಶಗಳು ಸಮರ್ಪಕವಾಗಿಲ್ಲ ಎಂದು ಖರ್ಗೆ ತಮ್ಮ ಇಂಡಿಯಾ ಕೂಟದ ಇತರೆ ಪಕ್ಷದ ಮುಖ್ಯಸ್ಥರಿಗೆ ಪತ್ರ ಬರೆದ್ದರು.